alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾ! ‘ಆಪಲ್’ ಗೆ ‘ಗೂಗಲ್’ ನೀಡ್ತಿರೋ ಹಣವೆಷ್ಟು ಗೊತ್ತಾ?

apple_head_1502803099

ಐಫೋನ್ ಹಾಗೂ ಐಪಾಡ್ ಗಳಲ್ಲಿ ಗೂಗಲ್ ಅನ್ನು ಡಿಫಾಲ್ಟ್ ಸರ್ಚ್ ಎಂಜಿನ್ ಆಗಿ ಉಳಿಸಿಕೊಳ್ಳಲು ಆಪಲ್ ಕಂಪನಿ 3 ಬಿಲಿಯನ್ ಡಾಲರ್ ಹಣ ಪಡೆಯುತ್ತಿದೆ. ಇದಕ್ಕಾಗಿ ಗೂಗಲ್ 2014-16ರಲ್ಲಿ ಆಪಲ್ ಕಂಪನಿಗೆ 1 ಬಿಲಿಯನ್ ಡಾಲರ್ ಪಾವತಿಸಿತ್ತು. ಆದ್ರೆ ಈ ವರ್ಷ 3 ಬಿಲಿಯನ್ ಡಾಲರ್ ಹಣವನ್ನು ಕೊಡಬೇಕಿದೆ.

ಗೂಗಲ್ ಪಾವತಿಸುವ ಪೂರ್ತಿ ಹಣ ಆಪಲ್ ಕಂಪನಿಗೆ ಲಾಭದ ಮೊತ್ತವಾಗಲಿದೆ. ಈ ವರ್ಷ ಆಪಲ್ ಕಂಪನಿಯ ಒಟ್ಟಾರೆ ಲಾಭದಲ್ಲಿ ಶೇ.5ರಷ್ಟು ಗೂಗಲ್ ಕಂಪನಿಯಿಂದ್ಲೇ ಆಗಿರೋದು ವಿಶೇಷ. ಕಳೆದ ಎರಡು ವರ್ಷಗಳಿಗೆ ಹೋಲಿಸಿದ್ರೆ ಈ ಪ್ರಮಾಣ ಶೇ.25ರಷ್ಟಾಗಲಿದೆ ಅಂತಾ ವಿಮರ್ಷಕರು ತಿಳಿಸಿದ್ದಾರೆ.

ಗೂಗಲ್ ಅತ್ಯಂತ ಜನಪ್ರಿಯವಾಗಿದೆ. ಮೊಬೈಲ್ ಗಳಲ್ಲಿ ಡಿಫಾಲ್ಟ್ ಎಂಜಿನ್ ಆಗಿ ಬಳಸಲು ಹಣ ಕೊಡಬೇಕಾದ ಅಗತ್ಯ ಕೂಡ ಗೂಗಲ್ ಗೆ ಇಲ್ಲ. ಆದ್ರೂ ಜನಪ್ರಿಯತೆಯನ್ನು ಹಾಗೇ ಉಳಿಸಿಕೊಳ್ಳಲು ಗೂಗಲ್ ಇಂತಹ ಪ್ರಯತ್ನಗಳನ್ನು ಮುಂದುವರಿಸಿದೆ. ಗೂಗಲ್ ಮೊಬೈಲ್ ಸರ್ಚ್ ನಿಂದ Ios ಡಿವೈಸ್ ಗಳಿಗೂ ಲಾಭವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...