alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನು ಟ್ಯಾಬ್ ನಲ್ಲೇ ಶಾಪಿಂಗ್ ಮಾಡಿ…! ಗೂಗಲ್ ಪರಿಚಯಿಸುತ್ತಿದೆ ಶಾಪಿಂಗ್ ಟ್ಯಾಬ್

ಶಾಪಿಂಗ್ ಗೆಂದೇ ಎಕ್ಸ್ ಕ್ಲೂಸಿವ್ ಆಗಿ ಟ್ಯಾಬ್ ಸಿದ್ಧವಾಗುತ್ತಿದೆ. ಇಂಟರ್ ನೆಟ್ ನಲ್ಲಿ ಇ- ಖರೀದಿಗೆ ಸಿಕ್ಕ ಸಿಕ್ಕ ವೆಬ್ ಸೈಟ್ ಹುಡುಕಾಡುತ್ತಾ ಸಮಯ ಹಾಳು ಮಾಡುವ ಬದಲು ಶಾಪಿಂಗ್ ಟ್ಯಾಬ್ ಬಳಸಿದರೆ ಖುಲ್ಲಂ ಖುಲ್ಲಾ ಗ್ರಾಹಕರ ನಿರೀಕ್ಷಿತ ಜಾಲತಾಣ ಅಥವಾ ಪ್ರಾಡೆಕ್ಟ್ ಅನ್ನು ಪರದೆ ಮೇಲೆ ತಂದು ನಿಲ್ಲಿಸಲಿದೆ.

ಸರ್ಚ್ ಎಂಜಿನ್ ಕ್ಷೇತ್ರದ ದೈತ್ಯ ಕಂಪೆನಿ ಗೂಗಲ್ ಇದೀಗ ಶಾಪಿಂಗ್ ಟ್ಯಾಬ್ ಪರಿಚಯಿಸಲು ತಯಾರಿ ನಡೆಸಿದೆ.

ಆನ್ಲೈನ್ ವ್ಯಾಪಾರ ಕ್ಷೇತ್ರದ ವೆಬ್ ಸೈಟ್ ಗಳನ್ನು ಹುಡುಕಲು, ಉತ್ಪನ್ನಗಳನ್ನು ಖರೀದಿಸಲು ಮತ್ತು ಇ ಕಾಮರ್ಸ್ ವೇದಿಕೆಯಾಗಿ ಗ್ರಾಹಕರಿಗೆ ಈ ಶಾಪಿಂಗ್ ಟ್ಯಾಬ್ ಸಹಕರಿಸಲಿದೆ.

ಮಾರುಕಟ್ಟೆಗೆ ಈ ವರ್ಷದ ಅಂತ್ಯದಲ್ಲಿ ಈ ಟ್ಯಾಬ್ ಬಿಡುಗಡೆಗೊಳ್ಳಲಿದ್ದು, ಅಷ್ಟರಲ್ಲಿ ಶೀಘ್ರವೇ ಪ್ರಾಯೋಗಿಕವಾಗಿ ಬಳಕೆ ಮಾಡಿ ಸಾಧಕ ಬಾಧಕ ಪತ್ತೆ ಮಾಡಲಾಗುತ್ತದೆ ಎಂದು ಗೂಗಲ್ ಮೂಲಗಳು ತಿಳಿಸಿವೆ.

ಗ್ರಾಹಕರು ಸ್ಥಳೀಯ ವ್ಯಾಪಾರಿಗಳಿಂದ ತ್ವರಿತವಾಗಿ ಮತ್ತು ಪರಿಣಾಮಕಾರಿ ಖರೀದಿಸಲು ಅವಶ್ಯಕವಾದ ಉತ್ಪನ್ನವನ್ನು ಹೊರತರಲು ಎದುರು ನೋಡುತ್ತಿದ್ದೇವೆ ಎಂದು ಗೂಗಲ್ ಕೂಡ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದೆ. ಗೂಗಲ್  ಈಗಾಗಲೇ ಫ್ಲಿಪ್ ಕಾರ್ಟ್, ಪೇಟಿಎಂ ಮಾಲ್ ಮತ್ತು ಸ್ನಾಪ್ ಡೀಲ್ ನಂಥ ಇ ಕಾಮರ್ಸ್ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...