alex Certify
ಕನ್ನಡ ದುನಿಯಾ       Mobile App
       

Kannada Duniya

899 ರೂ.ಗೆ ಸಿಗ್ತಿದೆ ಸೆಲ್ಫಿ ಕ್ಯಾಮರಾವುಳ್ಳ ಹೊಸ ಫೀಚರ್ ಫೋನ್

ರಿಲಾಯನ್ಸ್ ಜಿಯೋ ಫೀಚರ್ ಫೋನ್ ನಂತ್ರ ಮೈಕ್ರೋಮ್ಯಾಕ್ಸ್, ಬಿ ಎಸ್ ಎನ್ ಎಲ್ ಸಹಭಾಗಿತ್ವದಲ್ಲಿ ಭಾರತ್ 1 ಫೋನ್ ಬಿಡುಗಡೆ ಮಾಡಿದೆ. ಈಗ ಮೊಬೈಲ್ ತಯಾರಿಕಾ ಕಂಪನಿ ಎ-ಟೆಕ್ ತನ್ನ ಹೊಸ ಸೆಲ್ಫಿ ಫೀಚರ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದ್ರ ಹೆಸರು ಜಿ24 ಆಗಿದ್ದು, ಫೋನ್ ನೋಡಲು ಆಕರ್ಷಕವಾಗಿದೆ.

ಜಿ24 ಫೋನ್ ನಲ್ಲಿ 1,000 mAh ಬ್ಯಾಟರಿ ನೀಡಲಾಗಿದೆ. 7 ಗಂಟೆಯವರೆಗೆ ಟಾಕ್ ಟೈಮ್ ನೀಡುವ ಕ್ಷಮತೆ ಫೋನ್ ಗಿದೆ. ಈ ಫೋನ್ ಐದು ಭಾಷೆಗಳಿಗೆ ಸಪೋರ್ಟ್ ಮಾಡಲಿದೆ. ಇಂಗ್ಲೀಷ್, ಹಿಂದಿ, ಕನ್ನಡ, ತೆಲುಗು ಹಾಗೂ ಬೆಂಗಾಲಿ ಭಾಷೆಯಲ್ಲಿ ಸಂದೇಶಗಳನ್ನು ರವಾನೆ ಮಾಡಬಹುದಾಗಿದೆ. ಜಿ24 ಮೊಬೈಲ್ 1.8 ಇಂಚಿನ QQVGA ಸೆಲ್ಫಿ ನೀಡಿದೆ.

ವಿಶೇಷವೆಂದ್ರೆ ಇದ್ರಲ್ಲಿ ಡ್ಯುಯೆಲ್ ಡಿಜಿಟಲ್ ಕ್ಯಾಮರಾ ನೀಡಲಾಗಿದೆ. ಇದ್ರ ಇಂಟರ್ನಲ್ ಮೆಮೊರಿ 16 ಜಿಬಿಯಾಗಿದ್ದು, MP3/MP4/WAV ಸೌಲಭ್ಯ ಇದ್ರಲ್ಲಿದೆ. ಜಿ24 ಮೊಬೈಲ್ ಬೆಲೆ 899 ರೂಪಾಯಿಯಾಗಿದೆ. ಮೊಬೈಲ್ ಕಪ್ಪು, ಕೆಂಪು, ನೀಲಿ, ಬೂದಿ ಹಾಗೂ ಕಂದು ಬಣ್ಣದಲ್ಲಿ ಲಭ್ಯವಿದೆ. ಈ ಮೊಬೈಲ್ 20 ಸಾವಿರ ಚಿಲ್ಲರೆ ಅಂಗಡಿಗಳು ಹಾಗೂ ಇ ಕಾಮರ್ಸ್ ಕಂಪನಿಗಳಾದ ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ ನಲ್ಲಿ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...