alex Certify
ಕನ್ನಡ ದುನಿಯಾ       Mobile App
       

Kannada Duniya

ಏಪ್ರಿಲ್ 1 ರಿಂದ ಈ ವಸ್ತುಗಳ ಮಾರಾಟ-ಖರೀದಿ ಸಾಧ್ಯವಿಲ್ಲ

ಅಂಗಡಿ ಮಾಲೀಕರು ಹಾಗೂ ಖರೀದಿದಾರರು ಅವಶ್ಯವಾಗಿ ತಿಳಿಯಲೇ ಬೇಕಾದ ಸುದ್ದಿ ಇದು. ಏಪ್ರಿಲ್ 1ರಿಂದ ಹಲವಾರು ವಿಷ್ಯಗಳಲ್ಲಿ ಬದಲಾವಣೆಯಾಗಲಿದೆ. ಹಳೆ ಎಂಆರ್ಪಿ ಸ್ಟಿಕ್ಕರ್ ಇರುವ ವಸ್ತುಗಳನ್ನು ಏಪ್ರಿಲ್ 1ರಿಂದ ಮಾರಾಟ ಮಾಡಲು ಸಾಧ್ಯವಿಲ್ಲ.

ಹಳೆ ಎಂಆರ್ ಪಿ ವಸ್ತುಗಳ ಮಾರಾಟ ತಡೆಯಲು ಸರ್ಕಾರ ಕೂಡ ಮಹತ್ವದ ಹೆಜ್ಜೆ ಇಟ್ಟಿದೆ. ಕಳೆದ ಜುಲೈನಲ್ಲಿ ಜಿಎಸ್ಟಿ ಜಾರಿಗೆ ಬಂದಿದೆ. ಅದಕ್ಕಿಂತ ಮೊದಲು ಸಿದ್ಧವಾದ ವಸ್ತುಗಳನ್ನು ಹಳೆ ಎಂಆರ್ ಪಿಗೆ ಮಾರಾಟ ಮಾಡಲು ಸಾಧ್ಯವಿಲ್ಲ. ಎಲ್ಲ ಅಂಗಡಿ ಮಾಲೀಕರು ಮತ್ತು ಕಂಪನಿಗಳು ಹಳೆ ಸ್ಟಾಕ್ ಗಳನ್ನು ಹೊಸ ಎಂಆರ್ ಪಿ ಸ್ಟಿಕ್ಕರ್ ಜೊತೆ ಮಾರಾಟ ಮಾಡಬೇಕು.

ಈ ಬಗ್ಗೆ  ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಾಹಿತಿ ನೀಡಿದ್ದಾರೆ. ಹಳೆ ಎಂಆರ್ ಪಿ ಸ್ಟಿಕ್ಕರ್ ಇರುವ ವಸ್ತುಗಳ ಮಾರಾಟ ಏಪ್ರಿಲ್ 1ರಿಂದ ಸಾಧ್ಯವಿಲ್ಲ. ಸಮಯ ಮಿತಿಯನ್ನು ಮಾರ್ಚ್ 31ರ ನಂತ್ರ ವಿಸ್ತರಿಸಲು ಸಾಧ್ಯವಿಲ್ಲವೆಂದು ಸಚಿವರು ಹೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...