alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಎ.ಟಿ.ಎಂ. ನಲ್ಲಿ ಸಿಗುತ್ತೆ ಚಿನ್ನ, ಪಡೆಯಲು ಮುಗಿಬಿದ್ದ ಜನ

A gold-dispensing ATM machine is seen on its first day of operation at the Town Center Mall in Boca Raton, Florida December 17, 2010. The Gold to Go gold bullion vending machine was brought to the United States by PMX Gold LLC. REUTERS/Joe Skipper (UNITED STATES - Tags: BUSINESS)

ಬೆಂಗಳೂರು: ಎ.ಟಿ.ಎಂ. ಸೆಂಟರ್ ಗಳಲ್ಲಿ ಸಾಮಾನ್ಯವಾಗಿ ಹಣ ಪಡೆಯಬಹುದು. ಮತ್ತೆ ಕೆಲವು ಎ.ಟಿ.ಎಂ. ಗಳಲ್ಲಿ ಹಣ ಪಾವತಿಸುವ ವ್ಯವಸ್ಥೆ ಇದೆ.

ಎ.ಟಿ.ಎಂ. ಗಳಲ್ಲಿ ಹಣ ಪಡೆಯುವುದು, ಪಾವತಿಸುವುದು ಸಾಮಾನ್ಯ.  ಆದರೆ,  ಚಿನ್ನವನ್ನೂ ಪಡೆಯಬಹುದಾಗಿದೆ. ಹೌದು ಎ.ಟಿ.ಎಂ. ಸೆಂಟರ್ ನಲ್ಲಿ ಚಿನ್ನದ ನಾಣ್ಯ ಪಡೆಯುವ ಸೌಲಭ್ಯವನ್ನು ಬ್ಲೂ ಸ್ಟೋನ್ ಜ್ಯುವೆಲ್ಲರಿ ಕಂಪನಿ ಕಲ್ಪಿಸಿದೆ.

ಈ ಎ.ಟಿ.ಎಂ. ನಲ್ಲಿ ನೀವು ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಸ್ವೈಪ್ ಮಾಡಿ, ಚಿನ್ನದ ನಾಣ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಅಲ್ಲದೇ, ನಗದು ಪಾವತಿಸಿ ನಾಣ್ಯವನ್ನು ಖರೀದಿಸಬಹುದು. 1 ಗ್ರಾಂ ನಿಂದ 20 ಗ್ರಾಂ ವರೆಗೆ ಚಿನ್ನದ ನಾಣ್ಯಗಳು ಎ.ಟಿ.ಎಂ.ನಲ್ಲಿದ್ದು, ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಗೆ ಅನುಸಾರವಾಗಿ ನೀವು ಹಣ ಪಾವತಿಸಿ, ನಾಣ್ಯ ಪಡೆದುಕೊಳ್ಳಬಹುದು. ನಾಣ್ಯದ ಜೊತೆಯಲ್ಲಿ ಚಿನ್ನದ ಶುದ್ಧತೆಯ ಪತ್ರ ಕೂಡ ನಿಮ್ಮ ಕೈ ಸೇರಲಿದೆ.

ಸಾಮಾನ್ಯ ಎ.ಟಿ.ಎಂ ರೀತಿಯಲ್ಲೇ ಇದು ಕಾರ್ಯ ನಿರ್ವಹಿಸಲಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಪ್ರಾಯೋಗಿಕವಾಗಿ ಈ ಚಿನ್ನದ ನಾಣ್ಯದ ಎ.ಟಿ.ಎಂ. ಸೆಂಟರ್ ಆರಂಭಿಸಲಾಗಿದೆ ಎಂದು ಬ್ಲೂ ಸ್ಟೋನ್ ಜ್ಯುವೆಲ್ಲರಿ ಕಂಪನಿ ಸಿ.ಇ.ಓ. ತಿಳಿಸಿದ್ದಾರೆ. ಈ ಚಿನ್ನದ ನಾಣ್ಯದ ಎ.ಟಿ.ಎಂ. ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...