alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿ ವಸ್ತುಗಳ ಕಳವು ತಡೆಯಲು ಹೊಸ ಪ್ಲಾನ್ ಮಾಡಿದೆ ಫ್ಲಿಪ್ಕಾರ್ಟ್

ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಆ್ಯಂಟಿ ಥೆಪ್ಟ್ ಪ್ಯಾಕೇಜ್ ಒಂದನ್ನು ಸಿದ್ಧಪಡಿಸಿದೆ. ಅಮೂಲ್ಯ ವಸ್ತುಗಳು ಕಳವಾಗದಂತೆ ತಡೆಯಬಲ್ಲ ವಿಶಿಷ್ಟ ಬಾಕ್ಸ್ ಇದು. ಮೊಬೈಲ್, ಟ್ಯಾಬ್ಲೆಟ್ ಮತ್ತು ವಾಚ್ ಗಳು ಕಳವಾಗದಂತೆ ನೋಡಿಕೊಳ್ಳುತ್ತದೆ.

ಎಷ್ಟೋ ಬಾರಿ ಗ್ರಾಹಕರು ಆನ್ ಲೈನ್ ಮಾಡಿದ ಪ್ರಾಡಕ್ಟ್ ಗಳು ಡೆಲಿವರಿಯಾಗುವುದಿಲ್ಲ. ಮದ್ಯದಲ್ಲೇ ಕಳವಾಗುತ್ತವೆ. ಮೊಬೈಲ್ ಬದಲು, ಕಲ್ಲು ಬಂದಿದ್ದೂ ಇದೆ. ಅದಲ್ಲದೆ ಕೆಲವೊಮ್ಮೆ ಉತ್ಪನ್ನಗಳು ಗ್ರಾಹಕರ ಕೈಸೇರುವಷ್ಟರಲ್ಲಿ ಡ್ಯಾಮೇಜ್ ಆಗಿರುತ್ತವೆ.

ಇದನ್ನೆಲ್ಲ ಈ ಪ್ರೊಟೆಕ್ಷನ್ ಬಾಕ್ಸ್ ತಡೆಯಬಲ್ಲದು. ನೀವು ಆರ್ಡರ್ ಮಾಡಿದ ವಸ್ತುವಿನ ಪ್ಯಾಕೇಜಿಂಗ್ ಗೆ ತೆಗೆದುಕೊಂಡ ಸಮಯ, ಇತರ ಮಾಹಿತಿ, ಟೆಕ್ನಿಕ್, ರಿ ಓಪನ್ ಅಥವಾ ರಿ ಸೀಲ್ ಮಾಡಲಾಗಿದ್ಯಾ ಎಂಬುದನ್ನೆಲ್ಲ ಈ ಬಾಕ್ಸ್ ತಿಳಿಸುತ್ತದೆ.

ಸದ್ಯ ಫ್ಲಿಪ್ಕಾರ್ಟ್ ಇದರ ಪೇಟೆಂಟ್ ಗಾಗಿ ಕಾಯ್ತಿದೆ. ಈ ಪ್ರೊಟೆಕ್ಷನ್ ಬಾಕ್ಸ್ ಮೂಲಕ ಗ್ರಾಹಕರಿಗೆ ನೆರವಾಗಲು ಉದ್ದೇಶಿಸಿದೆ. ಅದರಲ್ಲೂ ದುಬಾರಿ ಮೊಬೈಲ್ ಗಳ ಕಳವು ತಪ್ಪಿಸುವುದು ಪ್ರಮುಖ ಉದ್ದೇಶ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...