alex Certify
ಕನ್ನಡ ದುನಿಯಾ       Mobile App
       

Kannada Duniya

ಹಣಕಾಸು ಸಚಿವಾಲಯದ ಈ ಆಪ್ ನಲ್ಲಿ ಸಿಗಲಿದೆ ಬ್ಯಾಂಕ್ ನ ಎಲ್ಲ ಮಾಹಿತಿ

ಬ್ಯಾಂಕುಗಳ ಜೊತೆ ಸಮೀಕ್ಷಾ ಸಭೆ ನಡೆಸಿದ ಹಣಕಾಸು ಸಚಿವಾಲಯ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಜನರ ಅನುಕೂಲಕ್ಕಾಗಿ ಹೊಸ ಮೊಬೈಲ್ ಆ್ಯಪ್ ಬಿಡುಗಡೆ ಮಾಡುವುದಾಗಿ ಹಣಕಾಸು ಸಚಿವಾಲಯ ಹೇಳಿದೆ. ಜನ್ ಧನ್ ದರ್ಶಕ್ ಆ್ಯಪ್ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಈ ಆ್ಯಪ್ ನಲ್ಲಿ ಇಡೀ ದೇಶದ ಎಲ್ಲ ಬ್ಯಾಂಕ್ ಶಾಖೆಯ ವಿವರವನ್ನು ಗ್ರಾಹಕ ಪಡೆಯಬಹುದಾಗಿದೆ. ಇದ್ರ ಜೊತೆಗೆ ಐಎಫ್ಎಸ್ಸಿ ಕೋಡ್ ಬಗ್ಗೆ ಮಾಹಿತಿಯಿರಲಿದೆ. ಎಟಿಎಂ ಕಾರ್ಡ್ ಬಗ್ಗೆಯೂ ಮಾಹಿತಿ ಸಿಗಲಿದೆ. ಈ ಆ್ಯಪ್ ನಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ನೀಡಬಹುದಾಗಿದೆ. ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ಮಾಹಿತಿಯಿರಲಿದೆ.

ಹಣಕಾಸು ಸಚಿವಾಲಯ ಸಭೆಯಲ್ಲಿ MSME ಸಾಲದ ಬಗ್ಗೆಯೂ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಬ್ಯಾಂಕ್ ಶಾಖೆಗೆ ಹೋಗದೆ MSME ಗೆ 59 ನಿಮಿಷದಲ್ಲಿ ಸಾಲ ಸೌಲಭ್ಯ ದೊರೆಯಲಿದೆ. ಈ ಫ್ಲಾಟ್ಫಾರ್ಮ್ ನಲ್ಲಿ 1 ಕೋಟಿಯವರೆಗೆ ಸಾಲ ಸಿಗಲಿದೆ. ದಾಖಲೆಗಳನ್ನು ನೀಡಲು ನೀವು ಬ್ಯಾಂಕ್ ಗೆ ಹೋಗಬೇಕಾಗಿಲ್ಲ. ಸಾಲದ ಹಣವನ್ನು ಬ್ಯಾಂಕ್ ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...