alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮಾರುಕಟ್ಟೆಯಲ್ಲಿ 1200 ರೂ.ಗೆ ಸಿಗುತ್ತೆ 2 ಸಾವಿರ ರೂ.ನೋಟು

ಕೇಂದ್ರ ಸರ್ಕಾರ ನೋಟು ನಿಷೇಧಗೊಳಿಸಿ ಹೊಸ 500 ಹಾಗೂ 2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳನ್ನು ಜಾರಿಗೊಳಿಸಿದೆ. ಕೇಂದ್ರ ಹೊಸ ನೋಟು ಜಾರಿಗೆ ತಂದು ಕೆಲವೇ ದಿನಗಳಲ್ಲಿ ನಕಲಿ ನೋಟಿನ ಆರ್ಭಟ ಶುರುವಾಗಿದೆ. ದೇಶದ ಅನೇಕ ಕಡೆ ನಕಲಿ ನೋಟುಗಳು ಪತ್ತೆಯಾಗಿವೆ. ಬುಧವಾರ ದೆಹಲಿಯಲ್ಲಿ 6 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಬಾಂಗ್ಲಾದೇಶದ ಮಹಿಳೆಯೊಬ್ಬಳನ್ನು ನಕಲಿ ನೋಟು ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆಶ್ಚರ್ಯಕರ ವಿಷಯವೆಂದ್ರೆ ಪೊಲೀಸ್ ಕೈಗೆ ಸಿಕ್ಕಿಬಿದ್ದ ಎಲ್ಲ ಆರೋಪಿಗಳ ಕೈನಲ್ಲಿದ್ದ ನಕಲಿ ನೋಟು ಪಶ್ಚಿಮ ಬಂಗಾಳದ ಮಾಲ್ಡಾದಿಂದ ಬಂದಿದೆ. ಮಾಲ್ಡಾ ನಕಲಿ ನೋಟುಗಳ ಅಡ್ಡವಾಗಿದೆ. ರಾಷ್ಟ್ರೀಯ ತನಿಖಾ ತಂಡ ಕೂಡ ಇದನ್ನು ಸ್ಪಷ್ಟಪಡಿಸಿದೆ. ಮಾಲ್ಡಾಗೆ ನಕಲಿ ನೋಟುಗಳು ಬಾಂಗ್ಲಾದೇಶದಿಂದ ಬರ್ತಿವೆ ಎಂಬ ಸಂಗತಿಯೂ ಬಹಿರಂಗವಾಗಿದೆ.

ಬಾಂಗ್ಲಾದೇಶಕ್ಕೆ ಉತ್ತಮ ರೈಲ್ವೆ ಹಾಗೂ ರಸ್ತೆ ಸಂಪರ್ಕ ಹೊಂದಿರುವ ಕಾರಣ ಮಾಲ್ಡಾವನ್ನು ಭಾರತದ ನಕಲಿ ಕರೆನ್ಸಿ ಸರಬರಾಜು ಕೇಂದ್ರವನ್ನಾಗಿ ಮಾಡಿಕೊಳ್ಳಲಾಗಿದೆ. ಬಾಂಗ್ಲಾ ಗಡಿಯಲ್ಲಿರುವ ಹಿಂದೂಸ್ತಾನಿ ಗ್ರಾಮವೊಂದು ನಕಲಿ ನೋಟಿನ ಕಥೆಯನ್ನು ಹೇಳುತ್ತದೆ. 50 ಸಾವಿರದಿಂದ 1 ಲಕ್ಷದವರೆಗೆ ನಕಲಿ ನೋಟುಗಳ ಬಂಡಲ್ ಗಳನ್ನು ಈ ಗ್ರಾಮಕ್ಕೆ ತರಲಾಗುತ್ತದೆ. ಸಂಜೆ ಗಡಿಯ ಬದಿಯಲ್ಲಿ ಈ ಬಂಡಲ್ ಎಸೆಯಲಾಗುತ್ತದೆ. ಮಕ್ಕಳು ಕೂಡ ಈ ಬಂಡಲ್ ಎಸೆಯುವ ಕೆಲಸ ಮಾಡ್ತಾರೆ.

2 ಸಾವಿರ ಮುಖ ಬೆಲೆಯ ನಕಲಿ ನೋಟುಗಳಿಗೆ ಬೇಡಿಕೆ ಹೆಚ್ಚು. ಈ ಹಿಂದೆ ಒಂದು ಸಾವಿರ ರೂಪಾಯಿ ಒಳಗೆ 2 ಸಾವಿರ ರೂಪಾಯಿ ನಕಲಿ ನೋಟು ಸಿಗ್ತಿತ್ತು. ಆದ್ರೀಗ 1200ಕ್ಕೂ ನಕಲಿ ನೋಟು ಸಿಗೋದು ಕಷ್ಟವಾಗಿದೆ. 500 ರೂಪಾಯಿ ನಕಲಿ ನೋಟುಗಳು 300-350 ರೂಪಾಯಿಗೆ ಸಿಗುತ್ತೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...