alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯೂಸ್ ಫೀಡ್ ನಲ್ಲಿ ಅಪ್ಡೇಟ್ ತರುತ್ತಿದೆ ಫೇಸ್ಬುಕ್

fb-1

ಫೇಸ್ಬುಕ್ ತನ್ನ ನ್ಯೂಸ್ ಫೀಡ್ ನವೀಕರಿಸುತ್ತಿದೆ. ಫೇಸ್ಬುಕ್ ನಲ್ಲಿ ನೀಡಿರುವ ವೆಬ್ ಲಿಂಕ್ ಬೇಗ ಓಪನ್ ಆಗಲ್ಲ ಅಂತ ಇನ್ಮುಂದೆ ಬೇಸರ ಮಾಡಿಕೊಳ್ಳಬೇಕಾಗಿಲ್ಲ. ಯಾವ ವೆಬ್ ಸೈಟ್ ಬೇಗ ತೆರೆದುಕೊಳ್ಳೊತ್ತೋ ಹಾಗೆ ಯಾವ ವೆಬ್ ಸೈಟ್ ಬೇಗ ಡೌನ್ಲೋಡ್ ಆಗುತ್ತೋ ಅಂತಹ ವೆಬ್ ಸೈಟ್ ಗಳು ಫೇಸ್ಬುಕ್ ನಲ್ಲಿ ಹೆಚ್ಚಾಗಿ ಕಾಣಿಸಲಿದೆ.

ನಿಧಾನವಾಗಿ ತೆರೆದುಕೊಳ್ಳುವ ವೆಬ್ಸೈಟ್ ಗಳು ಫೇಸ್ಬುಕ್ ನ್ಯೂಸ್ ಫೀಡ್ ನಲ್ಲಿ ಕಡಿಮೆ ಕಾಣಿಸಿಕೊಳ್ಳಲಿದೆ. ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್ ಪ್ರಿಯರು ಈ ಬಗ್ಗೆ ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ಲಿಂಕ್ ಆಗಿರುವ ವೆಬ್ ಸೈಟ್ ಓಪನ್ ಆಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಇದು ಕಿರಿಕಿರಿಯುಂಟು ಮಾಡುತ್ತದೆ ಎಂದು ಫೇಸ್ಬುಕ್ ಬಳಕೆದಾರರು ದೂರಿದ್ದರು.

ಫೇಸ್ಬುಕ್ ತನ್ನ ಬ್ಲಾಗ್ ನಲ್ಲಿ ಈ ವಿಷ್ಯವನ್ನು ತಿಳಿಸಿದೆ. ಉದಾಹರಣೆಗೆ ಬಳಕೆದಾರರ ಇಂಟರ್ನೆಟ್ ವೇಗದ ಮೇಲೆ ನಿಮಗೆ ಲಿಂಕ್ ಕಾಣಸಿಗಲಿದೆ. ನಿಮ್ಮ ವೆಬ್ ಸೈಟ್ ವೇಗವಾಗಿಲ್ಲವಾದ್ರೆ ನಿಮಗೆ ವಿಡಿಯೋಗಳಿಗಿಂತ ಹೆಚ್ಚಾಗಿ ಸ್ಟೇಟಸ್ ಕಾಣಲಿದೆ. ವೇಗವಾಗಿದ್ದರೆ ವಿಡಿಯೋ ಹಾಗೂ ಸ್ಟೇಟಸ್ ಕಾಣಿಸಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...