alex Certify
ಕನ್ನಡ ದುನಿಯಾ       Mobile App
       

Kannada Duniya

ಎಕ್ಸಿಸ್ ಬ್ಯಾಂಕ್ ಗೆ ಅಪಖ್ಯಾತಿ: ಸ್ಪಷ್ಟನೆ ನೀಡಿದ ಸಿ.ಇ.ಓ.

axisbank-a

ನವದೆಹಲಿ: ನೋಯ್ಡಾದ ಎಕ್ಸಿಸ್ ಬ್ಯಾಂಕ್ ಶಾಖೆಯ ಮೇಲೆ ಕಳೆದ ವಾರ, ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ ಸಂದರ್ಭದಲ್ಲಿ, 20 ನಕಲಿ ಖಾತೆಗಳಲ್ಲಿ 60 ಕೋಟಿ ರೂ. ಅಕ್ರಮವಾಗಿ ಜಮಾ ಮಾಡಿದ್ದು ಪತ್ತೆಯಾಗಿತ್ತು.

ಇಂತಹ ಹಲವು ಪ್ರಕರಣಗಳು ಎಕ್ಸಿಸ್ ಬ್ಯಾಂಕ್ ಶಾಖೆಗಳಲ್ಲಿ ನಡೆದಿದ್ದು, ಈ ಕುರಿತಾಗಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿ.ಇ.ಓ. ಶಿಖಾ ಶರ್ಮಾ ಸ್ಪಷ್ಟನೆ ನೀಡಿದ್ದಾರೆ. ಕೆಲವು ಬೆರಳೆಣಿಕೆಯ ಉದ್ಯೋಗಿಗಳು ಮಾಡಿದ ಕೃತ್ಯದಿಂದ ಮುಜುಗರ ಅನುಭವಿಸುವಂತಾಗಿದೆ ಎಂದು ತಿಳಿಸಿದ್ದಾರೆ.

ಬ್ಯಾಂಕಿನ ಕಾರ್ಯಕ್ಷಮತೆ ಹೆಚ್ಚಿಸಲು, ಸುರಕ್ಷತೆ ಕಾಯ್ದುಕೊಳ್ಳಲು ಆಡಿಟ್ ಅನ್ನು ವೃತ್ತಿಪರ ಆಡಿಟಿಂಗ್ ಸಂಸ್ಥೆಗೆ ವಹಿಸಲಾಗಿದೆ. ಗ್ರಾಹಕರ ಹಿತಾಸಕ್ತಿಗೆ ಇನ್ನೂ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ.

55 ಸಾವಿರಕ್ಕೂ ಹೆಚ್ಚಿನ ಉದ್ಯೋಗಿಗಳು ಎಕ್ಸಿಸ್ ಬ್ಯಾಂಕ್ ನಲ್ಲಿದ್ದು, ಕೆಲವರು ಮಾಡಿದ ಕೃತ್ಯದಿಂದ ಅಪಖ್ಯಾತಿ ಬಂದಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ತನಿಖೆ ನಡೆಸುವ ತನಿಖಾ ಸಂಸ್ಥೆಗಳಿಗೆ ಸಹಕಾರ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...