alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿಗೂ ಮುನ್ನವೇ ಹೂಡಿಕೆದಾರರಿಗೆ ಸಿಕ್ತು ಸಿಹಿ ಸುದ್ದಿ

ಕೆಲದಿನಗಳಿಂದ ಇಳಿಮುಖದಲ್ಲಿ ಸಾಗಿದ್ದ ಷೇರು‌ಪೇಟೆ ಸೋಮವಾರ ಭಾರಿ ಏರಿಕೆ ಕಾಣುವ ಮೂಲಕ, ದೀಪಾವಳಿ ಮೊದಲೇ ಷೇರುದಾರರಿಗೆ ಸಿಹಿ ಸುದ್ದಿ‌ ನೀಡಿದ್ದು, ಒಂದೇ ದಿನದಲ್ಲಿ‌ ಸುಮಾರು 3 ಲಕ್ಷ ಕೋಟಿ ಹೂಡಿಕೆಯಾಗಿದೆ.

ಸೋಮವಾರದಂದು 40 ಸಾವಿರ ಕೋಟಿ ಮೌಲ್ಯದ ಸರಕಾರಿ‌ ಬಾಂಡ್ ಗಳನ್ನು ಆರ್.ಬಿ.ಐ. ಬಿಡುಗಡೆಗೊಳಿಸಿದ್ದರಿಂದ ಷೇರು ಪೇಟೆಯಲ್ಲಿ‌‌ ಈ ಜಿಗಿತ ಕಂಡಿದೆ ಎಂದು ವಿಶ್ಲೇಷಿಸಲಾಗಿದ್ದು, ಸೋಮವಾರದ ಅಂತ್ಯಕ್ಕೆ ಸೆನ್ಸೆಕ್ಸ್ ನಲ್ಲಿ‌ 718 ಪಾಯಿಂಟ್ ಹಾಗೂ ನಿಫ್ಟಿಯಲ್ಲಿ 221 ಪಾಯಿಂಟ್ ಏರಿಕೆ ಕಂಡಿದೆ‌.

ಪ್ರಮುಖವಾಗಿ ಷೇರು‌ ಜಿಗಿತದಿಂದ ಬ್ಯಾಂಕ್, ಐಟಿ,‌ ಫಾರ್ಮ ಹಾಗೂ ಲೋಹದ ಪದಾರ್ಥದಲ್ಲಿ ಏರಿಕೆ ಕಂಡಿದೆ. ಆದರೆ ಎಚ್.ಡಿ.ಎಫ್.ಸಿ., ಇಂಡಸ್ ಇಂಡ್ ಬ್ಯಾಂಕ್ ಸೇರಿದಂತೆ ಕೆಲ ಸಂಸ್ಥೆಗಳ ಷೇರು ಮೌಲ್ಯ ಮಾತ್ರ ಏರಿಕೆಯಾಗುವಲ್ಲಿ ವಿಫಲವಾಗಿವೆ.

ಸೋಮವಾರ ಷೇರು‌ ಜಿಗಿತವಾಗುತ್ತಿದ್ದಂತೆ ಸುಮಾರು ಮೂರು ಲಕ್ಷ ಕೋಟಿ ರೂಪಾಯಿ ಮೌಲ್ಯದ ಷೇರು ಖರೀದಿಸಿದ್ದಾರೆ. ಐಸಿಐಸಿಐ ಬ್ಯಾಂಕ್, ಟಾಟಾ ಪವರ್ ಸೇರಿದಂತೆ ಕೆಲ ಬ್ಯಾಂಕ್ ಗಳು ಷೇರು ಮೌಲ್ಯ‌ ಹೆಚ್ಚಿಸಿಕೊಂಡಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...