alex Certify
ಕನ್ನಡ ದುನಿಯಾ       Mobile App
       

Kannada Duniya

ಇ-ಕಾಮರ್ಸ್ ತಾಣಗಳಲ್ಲಿ ಖರೀದಿಯ ಸುಗ್ಗಿ

ecommerc

ನವದೆಹಲಿ: ಹಬ್ಬಗಳ ಸಾಲು ಆರಂಭವಾದ ಹಿನ್ನಲೆಯಲ್ಲಿ, ಇ-ಕಾಮರ್ಸ್ ಕಂಪನಿಗಳು ಭರ್ಜರಿ ರಿಯಾಯಿತಿ ಘೋಷಿಸಿದ್ದರಿಂದ ಹೆಚ್ಚಿನ ಗ್ರಾಹಕರು ಆನ್ ಲೈನ್ ಖರೀದಿಗೆ ಮುಗಿ ಬಿದ್ದಿದ್ದಾರೆ.

ಫ್ಲಿಪ್ ಕಾರ್ಟ್, ಅಮೆಜಾನ್, ಸ್ನ್ಯಾಪ್ ಡೀಲ್ ಮೊದಲಾದ ಇ-ಕಾಮರ್ಸ್ ತಾಣಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಹಬ್ಬದ ಪ್ರಯುಕ್ತ ಇ-ಕಾಮರ್ಸ್ ತಾಣಗಳಲ್ಲಿ ರಿಯಾಯಿತಿ ಘೋಷಿಸಿದ್ದು, ಸ್ನ್ಯಾಪ್ ಡೀಲ್ ಮಾರಾಟ ಆರಂಭವಾದ ಒಂದೇ ಗಂಟೆ ಅವಧಿಯಲ್ಲಿ ಬರೋಬ್ಬರಿ 20 ಲಕ್ಷ ಮಂದಿ ಭೇಟಿ ಕೊಟ್ಟಿದ್ದಾರೆ. 8 ಗಂಟೆಯಲ್ಲಿ 1 ಲಕ್ಷ ಮೊಬೈಲ್ ಮಾರಾಟವಾಗಿವೆ.

ಎಲೆಕ್ಟ್ರಾನಿಕ್ಸ್ ವಸ್ತುಗಳು, ಗೃಹಬಳಕೆ ವಸ್ತುಗಳು, ಫರ್ನಿಚರ್, ಬಟ್ಟೆ, ಟಾಯ್ಸ್ ಮೊದಲಾದವುಗಳ ಖರೀದಿಗೆ ಹೆಚ್ಚಿನ ಬೇಡಿಕೆ ಇದ್ದು, ಇವುಗಳಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳು ಮಾರಾಟದಲ್ಲಿ ಹೆಚ್ಚಿನ ಪಾಲು ಹೊಂದಿವೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...