alex Certify
ಕನ್ನಡ ದುನಿಯಾ       Mobile App
       

Kannada Duniya

ಅರ್ಧಕ್ಕೇ ಕಾಲೇಜು ಬಿಟ್ಟವನ ಕಂಪನಿಯ ವಹಿವಾಟು ಈಗ ಕೋಟಿ ರೂಪಾಯಿ

ಹುಸೇನ್ ಸೈಫಿಗೆ 12 ವರ್ಷದ ಬಾಲಕನಾಗಿದ್ದಾಗ ಅಪ್ಪ ಮನೆಗೊಂದು ಕಂಪ್ಯೂಟರ್ ತಂದಿದ್ದರು. ಆದರೆ ಮನೆಯಲ್ಲಿ ಯಾರಿಗೂ ಕಂಪ್ಯೂಟರ್ ಆಪರೇಟ್ ಮಾಡಲು ಗೊತ್ತಿರಲಿಲ್ಲ. ಆದರೆ ಚಪ್ಪಲಿ ಅಂಗಡಿ ಮಾಲೀಕನಾಗಿದ್ದ ಅಪ್ಪ, ತನ್ನ ಮಗನ ಜ್ಞಾನಾಭಿವೃದ್ಧಿಗೆ ಈ ಕಂಪ್ಯೂಟರ್ ನೆರವಾಗಬಹುದೆಂದು ಯೋಚಿಸಿದ್ರು. ಅಪ್ಪನ ಆಲೋಚನೆ ಸರಿಯಾಗಿತ್ತು.

ಮಧ್ಯಪ್ರದೇಶದ ಭೋಪಾಲ್‌ನ ಈ ಹುಸೇನ್ ಸೈಫಿಗೆ ಈಗ 21ರ ಹರೆಯ. ಇವರು ನಡೆಸುತ್ತಿರುವ ‘ಹ್ಯಾಕರ್ ಕೆರ್ನೆಲ್’ ಎಂಬ ಐಟಿ ಸರ್ವೀಸ್ ಸ್ಟಾರ್ಟಪ್‌ನ ವಾರ್ಷಿಕ ವಹಿವಾಟು 1 ಕೋಟಿ ರೂ. ದಾಟಿದೆ, ಅದೂ ಕೇವಲ ಮೂರು ವರ್ಷಗಳಲ್ಲಿ!

ಭಾರತ, ಅಮೆರಿಕ, ಜಪಾನ್ ಹಾಗೂ ದುಬೈನ 200ಕ್ಕೂ ಹೆಚ್ಚು ಕಂಪನಿಗಳಿಗೆ ಈ ಕಂಪನಿ ಮೊಬೈಲ್ ಮತ್ತು ವೆಬ್ ಅಪ್ಲಿಕೇಶನ್‌ ಅಭಿವೃದ್ಧಿ ಸೇವೆಗಳನ್ನು ಒದಗಿಸುತ್ತಿದೆ.

12ನೇ ವಯಸ್ಸಲ್ಲಿ ಅಪ್ಪ ಕಂಪ್ಯೂಟರ್ ತಂದಾಗ ಹುಸೇನ್, ಅದರಲ್ಲಿ ಗೇಮ್ಸ್ ಆಡುತ್ತಿದ್ದ. ಆದರೆ ಇದರಿಂದಾಗಿಯೇ ಮೊದಲ ವೆಬ್‌ಸೈಟ್ ಅಭಿವೃದ್ಧಿಗೊಳಿಸುವ ಚಿಂತನೆ ಈತನಲ್ಲಿ ಹುಟ್ಟಿತು. ಗೇಮ್ಸ್ ಅನ್ನು ಜನರು ಡೌನ್‌ಲೋಡ್ ಮಾಡುವಂತಹ ವೆಬ್‌ಸೈಟ್ ಮಾಡಿದರೆ ಹೇಗೆ ಎಂದು ಆಲೋಚಿಸಿದ. ಆದರೆ ಮಾಡುವುದು ಹೇಗೆಂದು ಗೊತ್ತಿರಲಿಲ್ಲ.

ಶಾಲೆಯಲ್ಲಿ ಎಂಎಸ್ ಫ್ರಂಟ್‌ಪೇಜ್ ಉಪಯೋಗಿಸಿ ವೆಬ್‌ಸೈಟ್ ಕ್ರಿಯೇಟ್ ಮಾಡುವುದು ಹೇಗೆಂಬ ತರಗತಿ ನಡೆಸಲಾಗುತ್ತಿತ್ತು. ಅಲ್ಲಿ ಆರಂಭದ ಪಾಠವಾಯಿತು. ಸ್ವಯಂ ಆಸಕ್ತಿಯಿಂದ ಹುಸೇನ್ ಇನ್ನಷ್ಟು ಕಲಿಯುತ್ತಾ ಹೋದರು. ಹೀಗೆ ನಿಧಾನವಾಗಿ ಎಚ್‌ಟಿಎಂಎಲ್, ಸಿಎಸ್ಎಸ್ ಹಾಗೂ ಇತರೆ ಕೋಡಿಂಗ್ ಭಾಷೆಯನ್ನು ಯೂಟ್ಯೂಬ್‌ ಮೂಲಕ ಕಲಿತುಕೊಂಡ್ರು. ಆ ಆರಂಭದ ದಿನಗಳನ್ನು ಈಗ ನೆನೆಸಿಕೊಂಡರೆ ನಗು ಬರುತ್ತದೆ ಎನ್ನುತ್ತಾರೆ ಹುಸೇನ್.

ಬಿಸಿಎ ಕೋರ್ಸ್‌ಗೆ ಸೇರಿದ್ದ ಹುಸೇನ್ ಜತೆಜತೆಗೆ ವೆಬ್‌ ಡಿಸೈನಿಂಗ್ ಹುಚ್ಚನ್ನೂ ಅಂಟಿಸಿಕೊಂಡಿದ್ದರು. ಸೈಡ್ ಬಿಸಿನೆಸ್ ಆಗಿ ಶುರು ಹಚ್ಚಿಕೊಂಡಿದ್ದರು. ಕಲಿಯುವಾಗಲೇ ತಿಂಗಳಿಗೆ 20,000 ರೂ. ತನಕ ದುಡಿಯುತ್ತಿದ್ದರು. ಈ ಸೈಡ್ ಬಿಸಿನೆಸ್ ಎಷ್ಟು ಬೆಳೆಯಿತು ಎಂದರೆ, ಕೈಯಲ್ಲಿರುವ ಕೆಲಸಗಳನ್ನು ಪೂರೈಸಲು ಕಾಲೇಜು ಶಿಕ್ಷಣವನ್ನು ಸೆಕೆಂಡ್ ಸೆಮಿಸ್ಟರ್‌ನಲ್ಲೇ ತೊರೆಯಬೇಕಾಯಿತು. ಹೀಗೆ ಬೆಳೆದ ಹುಸೇನ್ ಅವರ ಸ್ಟಾರ್ಟಪ್‌ ಈಗ 25 ಸದಸ್ಯರನ್ನು ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...