alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಯಶಸ್ಸಿನಿಂದ ಮುಖೇಶ್ ಅಂಬಾನಿಗೆ ಮತ್ತೊಂದು ಸಿಹಿ ಸುದ್ದಿ

ambani

ಜಿಯೋ ಫೋನ್ ಮೂಲಕ ಮತ್ತೊಮ್ಮೆ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಉದ್ಯಮಿ ಮುಖೇಶ್ ಅಂಬಾನಿ ಶ್ರೀಮಂತಿಕೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹಾಂಗ್ ಕಾಂಗ್ ನ ಲಿ ಕಾ ಶಿಂಗ್ ಅವರನ್ನು ಹಿಂದಿಕ್ಕಿದ್ದಾರೆ. ಏಷ್ಯಾದ ಎರಡನೇ ಶ್ರೀಮಂತ ಎನಿಸಿಕೊಂಡಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಲೀಕ ಮುಖೇಶ್ ಅಂಬಾನಿ ಅವರ ಆಸ್ತಿ ಈ ವರ್ಷ ಮತ್ತಷ್ಟು ಹೆಚ್ಚಾಗಿದೆ. ಈ ವರ್ಷ 12.1 ಬಿಲಿಯನ್ ಡಾಲರ್ ಅಂದ್ರೆ 77,000 ಕೋಟಿ ರೂಪಾಯಿ ಆಸ್ತಿ ಸೇರ್ಪಡೆಯಾಗಿದೆ. ಇದರೊಂದಿಗೆ ಮುಖೇಶ್ ಅಂಬಾನಿ ಅವರ ಒಟ್ಟಾರೆ ಆಸ್ತಿ ಈಗ 34.8 ಬಿಲಿಯನ್ ಡಾಲರ್.

ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ನಲ್ಲಿ ಮೊದಲು 29ನೇ ಸ್ಥಾನದಲ್ಲಿದ್ದ ಮುಖೇಶ್ ಅಂಬಾನಿ ಈಗ 19ನೇ ಸ್ಥಾನಕ್ಕೇರಿದ್ದಾರೆ. 2017ರ ಮೊದಲ ತ್ರೈಮಾಸಿಕದಲ್ಲಿ ಆರ್ ಐಎಲ್ ಕಂಪನಿಯ ಲಾಭ ಶೇ.28ರಷ್ಟು ಹೆಚ್ಚಳವಾಗಿದೆ. ಇನ್ನು ರಿಲಯೆನ್ಸ್ ಜಿಯೋ ಕೂಡ ಕೋಟ್ಯಾಂತರ ರೂಪಾಯಿ ಹೂಡಿಕೆಯನ್ನೂ ಪಡೆದುಕೊಂಡಿದೆ. ಆದ್ರೆ ಜಿಯೋದಿಂದ ಈವರೆಗೂ ಲಾಭವಾಗಿಲ್ಲ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...