alex Certify
ಕನ್ನಡ ದುನಿಯಾ       Mobile App
       

Kannada Duniya

ನ.18 ರವರೆಗೆ ಬ್ಯಾಂಕ್ ನಲ್ಲಿ ಜಮಾ ಆಯ್ತು 5,11,565 ಕೋಟಿ

old-note

ನವೆಂಬರ್ 8ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿರುವುದಾಗಿ ಘೋಷಣೆ ಮಾಡಿದ್ದಾರೆ. ನವೆಂಬರ್ 9ರಂದು ಬ್ಯಾಂಕ್ ಬಾಗಿಲು ಮುಚ್ಚಿತ್ತು. ನವೆಂಬರ್ 10ರಿಂದ ನೋಟು ಬದಲಾವಣೆ ಹಾಗೂ ಹಣ ಜಮಾವಣೆ ಕಾರ್ಯ ಶುರುವಾಗಿತ್ತು.

ಡಿಸೆಂಬರ್ 30ರವರೆಗೆ ಹಳೆ ನೋಟುಗಳ ಜಮಾವಣೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಪ್ರಧಾನ ಮಂತ್ರಿ ಘೋಷಣೆ ಮಾಡ್ತಿದ್ದಂತೆ ಜನರು ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತು ನೋಟು ಬದಲಾವಣೆ ಹಾಗೂ ಹಣ ಜಮಾವಣೆಯಲ್ಲಿ ತೊಡಗಿದ್ದಾರೆ. ಒಂದು ವಾರದಲ್ಲಿ ಸುಮಾರು 13 ಲಕ್ಷ ಕೋಟಿಯಿಂದ 14 ಲಕ್ಷ ಕೋಟಿ ರೂಪಾಯಿ ಬ್ಯಾಂಕ್ ನಲ್ಲಿ ಜಮಾ ಆಗಬಹುದೆಂದು ಅಂದಾಜಿಸಲಾಗಿತ್ತು. ನವೆಂಬರ್ 18ರವರೆಗೆ ಬ್ಯಾಂಕ್ ನಲ್ಲಿ ಎಷ್ಟು ಹಣ ಜಮಾವಣೆಯಾಗಿದೆ ಹಾಗೆ ಎಷ್ಟು ನೋಟುಗಳನ್ನು ಜನರು ಬದಲಾಯಿಸಿಕೊಂಡಿದ್ದಾರೆಂಬ ಮಾಹಿತಿ ಹೊರಬಿದ್ದಿದೆ.

ವರದಿ ಪ್ರಕಾರ, ನವೆಂಬರ್ 10 ರಿಂದ 18ರವರೆಗೆ 500 ಹಾಗೂ ಸಾವಿರ ಮುಖಬೆಲೆಯ 5 ಲಕ್ಷ 44 ಸಾವಿರ 5 ನೂರಾ 71 ರೂಪಾಯಿ ಕೊಡು-ಕೊಂಡುಕೊಳ್ಳುವ ವ್ಯವಹಾರ ನಡೆದಿದೆ.

ದೇಶದಾದ್ಯಂತ ಸುಮಾರು 6 ಕೋಟಿ ನೋಟುಗಳನ್ನು ಜನರು ಬದಲಾಯಿಸಿಕೊಂಡಿದ್ದಾರೆ.

5 ಲಕ್ಷ 11 ಸಾವಿರ 5 ನೂರಾ 65 ಕೋಟಿ ರೂಪಾಯಿ ಬ್ಯಾಂಕ್ ನಲ್ಲಿ ಜಮಾ ಆಗಿದೆ. ಒಂದು ಲಕ್ಷದ 3 ಸಾವಿರದ 3 ನೂರಾ 16 ಕೋಟಿ ರೂಪಾಯಿಯನ್ನು ಜನರು ಎಟಿಎಂನಿಂದ ಡ್ರಾ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...