alex Certify
ಕನ್ನಡ ದುನಿಯಾ       Mobile App
       

Kannada Duniya

ಆದಾಯ ತೆರಿಗೆ ಪಾವತಿ ಮೇಲೂ ನೋಟು ನಿಷೇಧದ ಎಫೆಕ್ಟ್

tax

ಆದಾಯ ತೆರಿಗೆ ಪಾವತಿ ಮೇಲೂ ನೋಟು ನಿಷೇಧ ಪರಿಣಾಮ ಬೀರಿದೆ. ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಈ ವರ್ಷ ತೆರಿಗೆ ಪಾವತಿದಾರರ ಸಂಖ್ಯೆ ಶೇ.24.7 ರಷ್ಟು ಹೆಚ್ಚಳವಾಗಿದೆ. ಐಟಿ ರಿಟರ್ನ್ ಸಂಖ್ಯೆಯಲ್ಲಿ ಶೇ.25 ರಷ್ಟು ಹೆಚ್ಚಳವಾಗಿದ್ದು, ಶೇ.41 ರಷ್ಟು ಅಧಿಕ ಅಡ್ವಾನ್ಸ್ ಟ್ಯಾಕ್ಸ್ ಸಂಗ್ರಹವಾಗಿದೆ.

ಆಗಸ್ಟ್ 5ರಂದು ಆದಾಯ ತೆರಿಗೆ ಪಾವತಿಗೆ ಕೇಂದ್ರ ಸರ್ಕಾರ ನೀಡಿದ್ದ ಗಡುವು ಅಂತ್ಯವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 2,26,97,843 ಮಂದಿ ತೆರಿಗೆ ಪಾವತಿಸಿದ್ದರು. ಈ ಬಾರಿ 2,82,92,955 ಮಂದಿ ಆದಾಯ ತೆರಿಗೆ ಕಟ್ಟಿದ್ದಾರೆ. ಖುದ್ದು ಹಣಕಾಸು ಸಚಿವ ಅರುಣ್ ಜೇಟ್ಲಿ, ಟ್ವಿಟ್ಟರ್ ನಲ್ಲಿ ಈ ಮಾಹಿತಿ ನೀಡಿದ್ದಾರೆ.

ಕಪ್ಪು ಹಣದ ವಿರುದ್ಧ ಹೋರಾಡಲು ಸರ್ಕಾರ ನೋಟು ನಿಷೇಧ ಮಾಡಿರುವುದು ಸಕಾರಾತ್ಮಕ ಪರಿಣಾಮ ಬೀರುತ್ತಿದೆ. ಸರ್ಕಾರದ ನೋಟು ನಿಷೇಧ ಬೆನ್ನಲ್ಲೇ ಐಟಿ ಇಲಾಖೆ ಕೂಡ ಕ್ಲೀನ್ ಮನಿ ಅಭಿಯಾನ ಹಮ್ಮಿಕೊಂಡಿದ್ದು, ಮೇಲಿಂದ ಮೇಲೆ ದಾಳಿ ನಡೆಸುತ್ತಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...