alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾ-ರಣವೀರ್ ವಿವಾಹಕ್ಕೂ ಮುನ್ನ ನಡೆಯಲಿದೆ ವಿಶೇಷ ಪೂಜೆ

ಬಾಲಿವುಡ್ ನಟ-ನಟಿಯರಾದ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ವಿವಾಹಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಸಾಂಪ್ರದಾಯಿಕವಾಗಿ ವಿವಾಹ ನಡೆಯಲಿದೆಯಂತೆ. ಇಟಲಿಯ ಲೇಕ್​ ಕೊಮೊ ನಗರದಲ್ಲಿ ನಡೆಯಲಿರುವ ವಿವಾಹ ಕಾರ್ಯಕ್ರಮದಲ್ಲಿ ಎಲ್ಲ ರೀತಿಯ ಶಾಸ್ತ್ರ-ಸಂಪ್ರದಾಯಗಳನ್ನೂ ಚಾಚು ತಪ್ಪದೆ ಪಾಲಿಸಲಾಗುತ್ತಿದೆ ಎಂಬುದು ವಿಶೇಷ.

ಇನ್ನು ದೀಪಿಕಾ-ರಣವೀರ್ ವಿವಾಹ ಹಿನ್ನಲೆಯಲ್ಲಿ ದೀಪಿಕಾ ಅಮ್ಮ ಅಜ್ವಲಾ ನೇತೃತ್ವದಲ್ಲಿ ವಿಶೇಷವಾದ ಪೂಜೆಯೊಂದು ಬೆಂಗಳೂರಿನಲ್ಲಿ ನಡೆಯಲಿದೆ. ವಿವಾಹಕ್ಕೆ ಮುನ್ನ ನಡೆಯಬೇಕಿರುವ ವಿಶೇಷ ಶಾಸ್ತ್ರ, ನಂದಿ ಪೂಜೆ, ಮೊದಲಾದ ಪದ್ಧತಿಗಳು ಮದುವೆಗೆ 10 ದಿನ ಮೊದಲು ಬೆಂಗಳೂರಿನಲ್ಲಿ ನಡೆಯಲಿದ್ದು, ನಂದಿ ದೇವಾಲಯವೊಂದರಲ್ಲಿ ಈ ಶಾಸ್ತ್ರಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇಟಲಿಯಲ್ಲಿ ನಡೆಯಲಿರುವ ವಿವಾಹ ಸಮಾರಂಭದ ಬಳಿಕ, ಬೆಂಗಳೂರು ಹಾಗೂ ಮುಂಬೈನಲ್ಲಿ ಅದ್ದೂರಿ ಆರತಕ್ಷತೆ ಸಹ ಆಯೋಜಿಸಲಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...