alex Certify
ಕನ್ನಡ ದುನಿಯಾ       Mobile App
       

Kannada Duniya

4 ವರ್ಷಗಳಲ್ಲಿ ಮರೆಯಾಗಲಿವೆ ಕ್ರೆಡಿಟ್, ಡೆಬಿಟ್ ಕಾರ್ಡ್–ATM

ನವದೆಹಲಿ: ನೀವು ಬಳಸುತ್ತಿರುವ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಎ.ಟಿ.ಎಂ.ಗಳು ಕಣ್ಮರೆಯಾಗಲಿವೆ. ಮುಂದಿನ 4 ವರ್ಷಗಳಲ್ಲಿ ಇವುಗಳ ಬಳಕೆ ತಗ್ಗಲಿದ್ದು, ಕ್ರಮೇಣ ಕಣ್ಮರೆಯಾಗಲಿವೆ ಎಂದು ನೀತಿ ಆಯೋಗದ ಸಿ.ಇ.ಒ. ಅಮಿತಾಭ್ ಕಾಂತ್ ಹೇಳಿದ್ದಾರೆ.

ನೋಯ್ಡಾದ ಅಮತಿ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ವ್ಯವಹಾರಕ್ಕೆ ಮೊಬೈಲ್ ಬಳಕೆ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಕ್ಯಾಸ್ ಲೆಸ್ ವ್ಯವಹಾರ ಹೆಚ್ಚಾಗ್ತಿದೆ. ಮೊಬೈಲ್ ಬಳಸಿ ವ್ಯವಹಾರ ನಡೆಸುವವರ ಸಂಖ್ಯೆ ಕೂಡ ಜಾಸ್ತಿಯಾಗಿದೆ. ದೇಶದ ಶೇ. 72 ರಷ್ಟು ಮಂದಿ 32 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ ಯುವಕರು ತಂತ್ರಜ್ಞಾನವನ್ನು ಬಳಸಿಕೊಳ್ಳಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಯುವ ಜನತೆ ಹೆಚ್ಚಾಗಿರುವುದರಿಂದ ಅವರು ಸಹಜವಾಗಿಯೇ ತಂತ್ರಜ್ಞಾನದ ಅನುಕೂಲತೆಗಳನ್ನು ಪಡೆಯಲಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ಯುವಕರು ಹಣಕಾಸು ವ್ಯವಹಾರಗಳಿಗೆ ಮೊಬೈಲ್ ಫೋನ್ ಗಳನ್ನೇ ಹೆಚ್ಚಾಗಿ ಬಳಸಲಿದ್ದಾರೆ ಎಂದು ಹೇಳಿದ್ದಾರೆ.

ಯುವಕರು ವಹಿವಾಟುಗಳಿಗೆ ಮೊಬೈಲ್ ಬಳಸುವುದರಿಂದ ಮುಂದಿನ ವರ್ಷಗಳಲ್ಲಿ ಎ.ಟಿ.ಎಂ., ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆ ಕಡಿಮೆಯಾಗಲಿದೆ. ನಂತರದಲ್ಲಿ ಅವು ಮರೆಯಾಗಲಿವೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...