alex Certify
ಕನ್ನಡ ದುನಿಯಾ       Mobile App
       

Kannada Duniya

ಊಟ ಇಷ್ಟವಾಗದೇ ಇದ್ರೆ ಸರ್ವೀಸ್ ಚಾರ್ಜ್ ಕೊಡಬೇಕಾಗಿಲ್ಲ….

lunch

ಹೋಟೆಲ್, ರೆಸ್ಟೋರೆಂಟ್ ಗಳಿಗೆ ಹೆಚ್ಚಾಗಿ ಹೋಗುವವರಿಗೆ, ತಿನಿಸು ಪ್ರಿಯರಿಗೆ ಗುಡ್ ನ್ಯೂಸ್ ಇದೆ. ಯಾವುದೇ ಹೋಟೆಲ್ ನ ಸರ್ವೀಸ್, ಊಟ, ತಿಂಡಿ  ನಿಮಗೆ ಇಷ್ಟವಾಗದೇ ಇದ್ದಲ್ಲಿ ನೀವು ಸರ್ವೀಸ್ ಚಾರ್ಜ್ ಕೊಡಲು ನಿರಾಕರಿಸಬಹುದು.

ಹೋಟೆಲ್ ಗಳು ಬಿಲ್ ನಲ್ಲಿ ಶೇ.5-20ರಷ್ಟು ಭಾಗವನ್ನು ಟಿಪ್ಸ್ ಅಥವಾ ಸರ್ವೀಸ್ ಚಾರ್ಜ್ ರೂಪದಲ್ಲಿ ಪಡೆಯುತ್ತಿವೆ. ಆದ್ರೆ ಅದನ್ನು ಪಾವತಿಸುವುದು ಗ್ರಾಹಕರಿಗೆ ಕಡ್ಡಾಯವೇನಲ್ಲ ಅಂತಾ ಸರ್ಕಾರ ಹೇಳಿದೆ.

ಕೆಲವು ರೆಸ್ಟೋರೆಂಟ್ ಗಳಲ್ಲಿ ಸರ್ವೀಸ್ ಹಾಗೂ ತಿನಿಸುಗಳ ಕ್ವಾಲಿಟಿ ಅಷ್ಟಕ್ಕಷ್ಟೆ, ಆದ್ರೆ ಬಿಲ್ ಮಾತ್ರ ದುಬಾರಿ ಅಂತಾ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಹೋಟೆಲ್ ಸಂಘದಿಂದ್ಲೂ ಸರ್ಕಾರ ಸ್ಪಷ್ಟನೆ ಕೇಳಿತ್ತು. ಗ್ರಾಹಕರಿಗೆ ತೃಪ್ತಿಯಿಲ್ಲ ಎಂದಾದಲ್ಲಿ ಸರ್ವೀಸ್ ಚಾರ್ಜ್ ಕೊಡುವುದು ಕಡ್ಡಾಯವೇನಲ್ಲ, ಅವರವರ ಇಚ್ಛೆಗೆ ಬಿಟ್ಟಿದ್ದು ಅಂತಾ ಸರ್ಕಾರ ಪ್ರಕಟಣೆ ಹೊರಡಿಸಿದೆ. ಈ ನಿಯಮದ ಬಗ್ಗೆ ಎಲ್ಲಾ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಿಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಗಳಿಗೂ ಕೇಂದ್ರ ನಿರ್ದೇಶನ ನೀಡಿದೆ. ಜನರಲ್ಲೂ ಅರಿವು ಮೂಡಿಸುವಂತೆ ಸೂಚಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...