alex Certify
ಕನ್ನಡ ದುನಿಯಾ       Mobile App
       

Kannada Duniya

ಈಗ ಫ್ರಿಜ್, ಟಿವಿ ಖರೀದಿಸಿ ಆಮೇಲೆ ಹಣ ನೀಡಿ

consumer

ನೋಟು ನಿಷೇಧ ಟಿವಿ, ಫ್ರಿಜ್ ಸೇರಿದಂತೆ ಬೆಲೆಬಾಳುವ ವಸ್ತುಗಳ ಮಾರಾಟದ ಮೇಲೂ ಪ್ರಭಾವ ಬೀರಿದೆ. ಶೇಕಡಾ 40-50 ರಷ್ಟು ಮಂದಿ ಹಣ ನೀಡಿ ಈ ವಸ್ತುಗಳನ್ನು ಖರೀದಿ ಮಾಡ್ತಾರೆ. ಆದ್ರೆ ಹಳೆ ನೋಟುಗಳ ನಿಷೇಧದಿಂದಾಗಿ ಹಣ ನೀಡಿ ವಸ್ತು ಖರೀದಿಸುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಗ್ರಾಹಕರನ್ನು ಆಕರ್ಷಿಸಲು ಅನೇಕ ಅಂಗಡಿಗಳು ಭಿನ್ನ ಭಿನ್ನ ಆಫರ್ ನೀಡ್ತಾ ಇವೆ.

ವಿಡಿಯೋಕಾನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಎಂ ಸಿಂಗ್  ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಬಯ್ ನೌ, ಪೇ ಇನ್ 2017 ಆಫರ್ ಶುರುವಾಗಿದೆಯಂತೆ. ಇಎಂಐ ಮೂಲಕ ವಸ್ತುಗಳನ್ನು ಖರೀದಿಸುವ ಗ್ರಾಹಕರು ಈಗ ವಸ್ತುಗಳನ್ನು ಕೊಂಡೊಯ್ಯಬಹುದು. 2017 ಜನವರಿಯಿಂದ ಹಣ ನೀಡಬೇಕಾಗುತ್ತದೆ ಎಂದವರು ತಿಳಿಸಿದ್ದಾರೆ.

ನೋಟುಗಳ ನಿಷೇಧ ಮಾರುಕಟ್ಟೆ ವ್ಯವಹಾರದ ಮೇಲೆ ಶೇಕಡಾ 50 ರಷ್ಟು ಪರಿಣಾಮ ಬೀರಿದೆ. ಮದುವೆ ಹಾಗೂ ವರ್ಷಾಂತ್ಯದಲ್ಲಿ ಗ್ರಾಹಕರು ಹೆಚ್ಚಿನ ವಸ್ತುಗಳನ್ನು ಖರೀದಿ ಮಾಡ್ತಾರೆ. ಆದ್ರೆ ಹೊಸ ನೋಟುಗಳು ಕೈನಲ್ಲಿಲ್ಲದ ಕಾರಣ ಖರೀದಿಗೆ ಹಿನ್ನಡೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...