alex Certify
ಕನ್ನಡ ದುನಿಯಾ       Mobile App
       

Kannada Duniya

ನಾಲ್ಕು ಕಡೆ ನಾಣ್ಯದ ಉತ್ಪಾದನೆ ಬಂದ್..! ಮುಂದಿದೆಯಾ ಮಾರಿ ಹಬ್ಬ..?

ಕೇಂದ್ರದಲ್ಲಿರುವ ಮೋದಿ ಸರ್ಕಾರ ನಾಲ್ಕು ವರ್ಷ ಪೂರೈಸುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ಹಿಂದೆ ನೋಟುಗಳನ್ನು ನಿಷೇಧ ಮಾಡಿದ್ದ ಮೋದಿ ಸರ್ಕಾರ ಈಗ ನಾಣ್ಯಗಳನ್ನು ಬಂದ್ ಮಾಡುವ ತಯಾರಿಯಲ್ಲಿದೆ.

ನೋಯ್ಡಾ, ಮುಂಬೈ, ಕೋಲ್ಕತ್ತಾ ಹಾಗೂ ಹೈದ್ರಾಬಾದ್ ನಲ್ಲಿ ಸರ್ಕಾರ ನಾಣ್ಯ ಉತ್ಪಾದನೆಯನ್ನು ಬಂದ್ ಮಾಡಿದೆ. ಭಾರತೀಯ ಸರ್ಕಾರದ ಪರವಾಗಿ ಈ ನಾಲ್ಕು ಸ್ಥಳಗಳಲ್ಲಿ ಮಾತ್ರ ನಾಣ್ಯಗಳ ಉತ್ಪಾದನೆ ನಡೆಯುತ್ತದೆ.

ಆರ್ ಬಿಐ ಅಧಿಕಾರಿ ಪ್ರಕಾರ, ಮಂಗಳವಾರದಿಂದ ನಾಣ್ಯ ತಯಾರಿ ಬಂದ್ ಆಗಿದೆ. ನೋಟು ನಿಷೇಧದ ನಂತ್ರ ನಾಣ್ಯಗಳ ಉತ್ಪಾದನೆಯನ್ನು ಹೆಚ್ಚು ಮಾಡಲಾಗಿತ್ತು. ಸದ್ಯ ಆರ್ ಬಿ ಐ ಬಳಿ ಸಾಕಷ್ಟು ನಾಣ್ಯಗಳಿವೆ. ಸುಮಾರು 2500 MPCS ನಾಣ್ಯಗಳಿದೆ ಎನ್ನಲಾಗ್ತಿದೆ. ಹಾಗಾಗಿ ನಾಣ್ಯ ಉತ್ಪಾದನೆ ಬಂದ್ ಆಗಿದೆ. ಆರ್ ಬಿ ಐ ಮುಂದಿನ ಆದೇಶದವರೆಗೆ ನಾಣ್ಯ ಉತ್ಪಾದನೆಯಾಗುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...