alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದೆಯಾ ರೈಲ್ವೆ ಇಲಾಖೆ…?

ದೇಶದ ಅತಿದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೇ ಇಲಾಖೆ ಹಾಗೂ ಅದರ ಅಂಗ ಸಂಸ್ಥೆ ಐಅರ್ಸಿಟಿಸಿ ವಿರುದ್ಧ ನಿಗದಿತ ಬೆಲೆಗಿಂತ ಹೆಚ್ಚುವರಿ ಹಣ ಸಂಗ್ರಹಿಸುತ್ತಿದ್ದಾರೆ ಎಂಬ‌ ಆರೋಪ ಕೇಳಿಬಂದಿದ್ದು, ಈ ಸಂಬಂಧ ತನಿಖೆ ನಡೆಸಲು ಸಿಸಿಐ ಅದೇಶಿಸಿದೆ.

ಕೇಂದ್ರ ರೈಲ್ವೇ ಇಲಾಖೆ ವಿರುದ್ಧ ಗುಜರಾತ್ ಮೂಲದ ಶಾ ಹಾಗೂ ಅನಂದ್ ರಾಣ್ಪರ ಎಂಬುವವರು ದೂರು ನೀಡಿದ್ದ ಬೆನ್ನಲ್ಲೇ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾದಿಂದ ರೈಲ್ವೇ ಇಲಾಖೆಯ ಈ ಆರೋಪದ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಿದೆ.

ಪ್ರಯಾಣಿಕರು ನೀಡಿರುವ ಆರೋಪದಲ್ಲಿ ಪ್ರಮುಖವಾಗಿ‌, ಈ ಎರಡು ಸಂಸ್ಥೆಗಳು ಗ್ರಾಹಕರಿಗೆ ಸೇವೆ ನೀಡುವಾಗ ಮೂಲ ಬೆಲೆಗಿಂತ ಹೆಚ್ಚುವರಿ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ. ರೌಂಡ್ ಆಫ್ ಹೆಸರಲ್ಲಿ ಮೂಲ ಬೆಲೆಗಿಂತ ಪ್ರತಿ ಗ್ರಾಹಕರಿಂದ ಐದು ರೂಪಾಯಿಗೂ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಮುಖವಾಗಿ ಈ ವಂಚನೆ ಆನ್‌ಲೈನ್ ಗ್ರಾಹಕರಿಗೆ ಹೆಚ್ಚಾಗಿ ಆಗುತ್ತಿದೆ ಎಂದು ಅನೇಕರು ಆರೋಪಿಸಿದ್ದು, ಈ ಸಂಬಂಧ ಪ್ರಾಥಮಿಕ ಹಂತದಲ್ಲಿ ಆರೋಪ ಸಾಬೀತಾಗಿರುವದರಿಂದ, ತನಿಖೆಗೆ ಸೂಚಿಸಿದ್ದಾರೆ.

ರೌಂಡ್ ಅಫ್ ಮೊತ್ತ ಎನ್ನುವ ಹೆಸರಲ್ಲಿ ಒಂದು ಟಿಕೆಟ್ ಗಿಂತ ಹೆಚ್ಚು ಇ- ಟಿಕೆಟ್ ಪಡೆದರೂ, ಹೆಚ್ಚುವರಿ ಮೊತ್ತ ಗ್ರಾಹಕರ ಮೇಲೆ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಟಿಕೆಟ್ ಖರೀದಿಸುವಾಗ ಚಿಲ್ಲರೆ ಮೊತ್ತಕ್ಕಾಗಿ ಕೊಡು,ಕೊಳ್ಳುವ ವ್ಯವಹಾರ ನಡೆಸಲು ಹೆಚ್ಚು ಸಮಯ ವ್ಯರ್ಥವಾಗುತ್ತದೆ ಎನ್ನುವ ಕಾರಣಕ್ಕೆ, ಈ ರೀತಿ‌ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...