alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯದ ದೊರೆ ಮೇಲೆ ಮತ್ತೊಂದು ಕೇಸ್

cbi-lodged-a-new-case-against-vijya-malya

ನವದೆಹಲಿ: ಕಷ್ಟಗಳ ಸಾಗರದಲ್ಲೇ ಈಸುತ್ತಿರುವ ಮದ್ಯದ ದೊರೆ ಮಲ್ಯ ಅವರು ಈಗ ಮತ್ತೊಂದು ಸುಳಿಗೆ ಸಿಲುಕಿದ್ದಾರೆ. ವಿಜಯ್ ಮಲ್ಯ ಅವರ ವಿರುದ್ಧ ಸಿಬಿಐ ಶನಿವಾರ ಮತ್ತೊಂದು ಎಫ್ಐಆರ್ ದಾಖಲಿಸಿದೆ. ಇಷ್ಟೇ ಅಲ್ಲದೇ ಮಲ್ಯರ ಯುನೈಟೆಡ್ ಬ್ರೂವರೀಸ್ ಕಂಪನಿಯ ಹೆಸರೂ ಎಫ್ಐಆರ್ ನಲ್ಲಿ ದಾಖಲಾಗಿದೆ.

ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಸಾಲ ನೀಡಿದ 17 ಬ್ಯಾಂಕ್ ಗಳ ಒಡೆತನವನ್ನು ಸ್ಟೇಟ್ ಬ್ಯಾಂಕ್ ನಿರ್ವಹಿಸುತ್ತಿತ್ತು. ಈಗ ಸ್ಟೇಟ್ ಬ್ಯಾಂಕಿನ 1600 ಕೋಟಿ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ. 2005-2010 ರ ಅವಧಿಯಲ್ಲಿ ಪಡೆಯಲಾಗಿದ್ದ 6027 ಕೋಟಿ ರೂ. ಸಾಲವನ್ನು ಮರುಪಾವತಿ ಮಾಡದ ಹಿನ್ನಲೆಯಲ್ಲಿ ಈಗ ಮತ್ತೊಂದು ಎಫ್ಐಆರ್ ದಾಖಲಾಗಿದೆ.

ಕಿಂಗ್ ಫಿಷರ್ ಏರ್ ಲೈನ್ಸ್ ಸ್ಥಿತಿ ತೀರ ಹದಗೆಟ್ಟಿರುವಾಗಲೂ ಮಲ್ಯರ ವೈಯಕ್ತಿಕ ಹಾಗೂ ಯುನೈಟೆಡ್ ಬ್ರೂವರೀಸ್ ಜಾಮೀನಿನ ಮೇಲೆ ಸಾಲ ನೀಡಲಾಗಿತ್ತು. ಆದರೆ ಮಲ್ಯ ಕೆಲವು ಬ್ಯಾಂಕ್ ಗಳ ಸಾಲದಲ್ಲಿ 1,100 ಕೋಟಿಯನ್ನು ಪಾವತಿಸಿ ಮತ್ತೆ ಸಾಲ ಮಾಡಿದ್ದರು ಎಂದು ಆರೋಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...