alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ ಬಂಪರ್ ಕೊಡುಗೆ ! 2 ರೂ.ಗಿಂತ ಕಡಿಮೆ ಬೆಲೆಯಲ್ಲಿ 1 ಜಿಬಿ ಡೇಟಾ

ಭಾರ್ತಿ ಏರ್ ಟೆಲ್ ಚಂದಾದಾರರಿಗೆ ಹಲವಾರು ಡೇಟಾ ಕೊಡುಗೆಗಳನ್ನು ನೀಡಿದೆ. ಮೊಬೈಲ್ ನೆಟ್ ವರ್ಕ್ ಬಳಕೆದಾರರಿಗೆ ವಿವಿಧ ಆಫರ್ ನೀಡಲಾಗಿದ್ದು, ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಕೂಡ ಕೊಡುಗೆಗಳನ್ನು ಪ್ರಕಟಿಸಿದೆ.

ಏರ್ ಟೆಲ್ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ 2 ರೂ.ಗಿಂತ ಕಡಿಮೆ ಬೆಲೆಯಲ್ಲಿ 1 ಜಿ.ಬಿ. ಡೇಟಾ ನೀಡಲಾಗ್ತಿದೆ. ಏರ್ ಟೆಲ್ ಬ್ರಾಡ್ ಬ್ಯಾಂಡ್ ಹೊಸ ಯೋಜನೆ ಆರಂಭಿಸಿದ್ದು, 3299 ರೂ.ಗೆ 2000 ಜಿ.ಬಿ. ಡೇಟಾ ನೀಡಲಾಗುತ್ತದೆ.

ಅದರಂತೆ 1 ಜಿ.ಬಿ. ಡೇಟಾ 1.64 ರೂ.ಗೆ ಸಿಗಲಿದೆ. ಇದರೊಂದಿಗೆ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಪಡೆಯಬಹುದಾಗಿದೆ. 30 ದಿನಗಳ ಅವಧಿಯ ಪ್ಲಾನ್ ಇದಾಗಿದ್ದು, 16 ಎಂಬಿಪಿಎಸ್, 24 ಎಂಬಿಪಿಎಸ್, 40 ಎಂಬಿಪಿಎಸ್ ವೇಗದಲ್ಲಿ ಪ್ರಯೋಜನ ಪಡೆಯಬಹುದು. ತಮ್ಮ ಡೇಟಾ ಬಳಕೆಯನ್ನು ಆಧರಿಸಿ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು.

ಏರ್ ಟೆಲ್ ದೆಹಲಿ –ಎನ್.ಸಿ.ಆರ್. ನಲ್ಲಿ ಪರಿಚಯಿಸಿರುವ ಬ್ರಾಡ್ ಬ್ಯಾಂಡ್ ಯೋಜನೆಗಳಲ್ಲಿ ಕೆಲವು ಹೆಚ್ಚು ಮಾರಾಟವಾಗಿವೆ. 899 ರೂ., 1099 ರೂ., 1299 ರೂ., ಪ್ಲಾನ್ ಗಳಿವೆ. ಇದರಲ್ಲಿ 899 ರೂ. ಪ್ಲಾನ್ ನಲ್ಲಿ ಬಳಕೆದಾರರಿಗೆ ಅನಿಯಮಿತ ಸ್ಥಳೀಯ, ಎಸ್.ಟಿ.ಡಿ. ಕರೆ ಸೌಲಭ್ಯ, 150 ಜಿ.ಬಿ. ಬ್ರಾಡ್ ಬ್ಯಾಂಡ್ ಡೇಟಾವನ್ನು 40 ಎಂಬಿಪಿಎಸ್ ವೇಗದಲ್ಲಿ ನೀಡಲಾಗುವುದು.

1099 ರೂ. ಪ್ಲಾನ್ ಗೆ 250 ಜಿ.ಬಿ. ಡೇಟಾ 100 ಎಂಬಿಪಿಎಸ್ ವೇಗದಲ್ಲಿ ಸಿಗಲಿದೆ. 1299 ರೂ. ಯೋಜನೆಯಲ್ಲಿ ಮಾರ್ಚ್ 31, 2018 ರ ವರೆಗೆ ನೀಡಲಾಗಿರುವ 1000 ಜಿ.ಬಿ. ಬೋನಸ್ ಡೇಟಾ ಪಡೆಯಬಹುದು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...