alex Certify
ಕನ್ನಡ ದುನಿಯಾ       Mobile App
       

Kannada Duniya

ಬಜೆಟ್: ಗ್ರಾಮೀಣ ವಲಯಕ್ಕೆ ತೆರಿಗೆಯಲ್ಲಿ ಸಿಗುತ್ತಾ ರಿಯಾಯ್ತಿ…?

ನವದೆಹಲಿ: ಬಜೆಟ್ ನಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ವೇಗವಾಗಿ ಚಲಿಸುವ ಗ್ರಾಹಕರ ಸರಕುಗಳ ಕಂಪನಿಗಳು(Fast Moving Consumer Goods Company –FMCG) ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.

ಗ್ರಾಮೀಣ ಜನರ ವೈಯಕ್ತಿಕ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ತೆರಿಗೆಯಲ್ಲಿ ರಿಯಾಯ್ತಿ ನೀಡಬೇಕು ಇಲ್ಲವೇ, ಮನ್ನಾ ಮಾಡಬೇಕೆಂಬ ಬೇಡಿಕೆ ಇಡಲಾಗಿದೆ. ದೂರದ ಪ್ರದೇಶಗಳಿಗೆ ಸರಕುಗಳನ್ನು ಸಾಗಿಸಲು ಮೂಲ ಸೌಕರ್ಯ ಹೆಚ್ಚಿಸಲು ಒತ್ತಾಯಿಸಲಾಗಿದೆ.

ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾದ ಬಳಿಕ ಎಫ್.ಎಂ.ಸಿ.ಜಿ. ಸಂಸ್ಥೆಗಳ ಮಾರಾಟದಲ್ಲಿ ಹೆಚ್ಚಳವಾಗಿದ್ದು, ಅವು ಹೆಚ್ಚು ತೃಪ್ತಿ ಹೊಂದಿವೆ.

ಅವುಗಳ ಮಾರಾಟ ಸುಧಾರಣೆಯಾಗಿರುವುದರಿಂದ ಬಜೆಟ್ ಸಂದರ್ಭದಲ್ಲಿ ಈ ಕಂಪನಿಗಳು ಹಲವು ಬೇಡಿಕೆ ಇಟ್ಟಿದ್ದು, ಗ್ರಾಮೀಣ ವಲಯದಲ್ಲಿ ಉದ್ಯೋಗಾವಕಾಶ ನೀಡುವ ಯೋಜನೆಗಳಿಗೆ ಹೆಚ್ಚು ಅನುದಾನ ನೀಡಬೇಕು. ಕೃಷಿ ಉತ್ಪಾದಕತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಕೃಷಿ ಸಬ್ಸಿಡಿಗಳನ್ನು ಹೆಚ್ಚಿಸಬೇಕೆಂದು ಬೇಡಿಕೆ ಮಂಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...