alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಎಸ್ಎನ್ಎಲ್ ನೀಡ್ತಿದೆ ಲೈಫ್ ಟೈಂ ಉಚಿತ ವಾಯ್ಸ್ ಕಾಲಿಂಗ್

bsnl

ರಿಲಾಯನ್ಸ್ ಜಿಯೋ ದೂರಸಂಪರ್ಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಅದ್ರ ಯೋಜನೆಗಳು ಇತರ ಕಂಪನಿಗಳಿಗೆ ತಲೆ ನೋವು ತಂದಿತ್ತು. ಆದ್ರೀಗ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಮಾರುಕಟ್ಟೆಯಲ್ಲಿ ಹೊಸ ಯುದ್ಧ ಶುರುಮಾಡಲು ಅಣಿಯಾಗಿದೆ. ಜಿಯೋಕ್ಕೆ ಪೈಪೋಟಿ ನೀಡಲು ತಯಾರಿ ನಡೆಸಿದೆ.

ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಉಚಿತವಾಗಿ ವಾಯ್ಸ್ ಕಾಲಿಂಗ್ ನೀಡಲು ಮುಂದಾಗಿದೆ. ರಿಲಾಯನ್ಸ್ ಜಿಯೋಗಿಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ಈ ಸೌಲಭ್ಯ ದೊರಕಲಿದೆ. ರಿಲಾಯನ್ಸ್ ಜಿಯೋ ಕೇವಲ 4 ಜಿ ಬಳಕೆದಾರರಿಗೆ ಮಾತ್ರ ಉಚಿತ ವಾಯ್ಸ್ ಕಾಲಿಂಗ್ ನೀಡಿದೆ. ಆದ್ರೆ ಬಿಎಸ್ಎನ್ಎಲ್ 2 ಜಿ ಹಾಗೂ 3 ಜಿ ಗ್ರಾಹಕರಿಗೂ ಈ ಸೌಲಭ್ಯ ನೀಡಲಿದೆ.

ಜಿಯೋ ಪ್ಲಾನ್ ಗಿಂತ ಕಡಿಮೆ ಪ್ಲಾನ್ ಜಾರಿಗೆ ತರಲು ಮುಂದಾಗಿದ್ದೇವೆಂದು ಬಿಎಸ್ಎನ್ಎಲ್ ಅಧ್ಯಕ್ಷ ಅನುಪಮ್ ಶ್ರೀವಾಸ್ತವ್ ಹೇಳಿದ್ದಾರೆ. ಈ ಯೋಜನೆ 2-4 ರೂಪಾಯಿಯೊಳಗಿರಲಿದೆ ಎಂದವರು ಹೇಳಿದ್ದಾರೆ. ಮಾರುಕಟ್ಟೆ ಹಾಗೂ ಜಿಯೋ ಬೆಳವಣಿಗೆಯನ್ನು ನಾವು ನೋಡಿದ್ದೇವೆ. ಮುಂದಿನ ವರ್ಷ ಲೈಫ್ ಟೈಂ ಉಚಿತ ವಾಯ್ಸ್ ಕಾಲಿಂಗ್ ಆಫರ್ ನೀಡುವುದಾಗಿ ಅವರು ಹೇಳಿದ್ದಾರೆ.

ಯಾರ ಮನೆಯಲ್ಲಿ ಬ್ರಾಡ್ ಬ್ಯಾಂಡ್ ಸರ್ವೀಸ್ ಇದೆಯೋ ಅವರು ಈ ಸೌಲಭ್ಯ ಪಡೆಯಲಿದ್ದಾರೆ. ಜನರು ಮನೆಯಲ್ಲಿ ಸಾಕಷ್ಟು ಸಮಯ ಕಳೆಯುವುದರಿಂದ ಈ ಯೋಜನೆ ರೂಪಿಸಲಾಗಿದೆ. ಮನೆಯಿಂದ ಹೊರಗೆ ಹೋದ್ರೂ ಉಚಿತ ವಾಯ್ಸ್ ಕಾಲ್ ಕರೆ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...