alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಏಷ್ಯಾದಲ್ಲಿ ಪ್ರಯಾಣಿಸುವವರಿಗೆ ಚಿನ್ನ ಗೆಲ್ಲುವ ಅವಕಾಶ

539471-airasiagoldಅತಿ ಅಗ್ಗದ ಟಿಕೇಟ್ ದರಗಳನ್ನು ನಿಗದಿ ಮಾಡುವ ಮೂಲಕ ವಿಮಾನ ಪ್ರಯಾಣಿಕರನ್ನು ಆಕರ್ಷಿಸಿರುವ ಏರ್ ಏಷ್ಯಾ ಸಂಸ್ಥೆ, ಈಗ ಅಕ್ಟೋಬರ್ 10 ರಿಂದ ಅಕ್ಟೋಬರ್ 30 ರವರೆಗಿನ ಅವಧಿಯಲ್ಲಿ ವಿಮಾನ ಟಿಕೇಟ್ ಬುಕ್ ಮಾಡಿದವರಿಗೆ ಒಟ್ಟು 1 ಕೆ.ಜಿ. ವರೆಗೆ ಚಿನ್ನ ಗೆಲ್ಲುವ ಅವಕಾಶ ನೀಡಿದೆ.

ಅಕ್ಟೋಬರ್ 10 ರಿಂದ ಅಕ್ಟೋಬರ್ 16 ರವರೆಗೆ ಟಿಕೇಟ್ ಬುಕ್ ಮಾಡಿದ್ದ ಪ್ರಯಾಣಿಕರ ಚಿನ್ನ ಗೆಲ್ಲುವ ಡ್ರಾ ಅಕ್ಟೋಬರ್ 18 ರಂದು ನಡೆದಿದ್ದು, 5 ಮಂದಿ ವಿಜೇತರಿಗೆ ತಲಾ 50 ಗ್ರಾಂ ಚಿನ್ನದ ನಾಣ್ಯ ನೀಡಲಾಗುವುದು.

ಎರಡನೇ ಹಂತದಲ್ಲಿ ಅಕ್ಟೋಬರ್ 17 ರಿಂದ ಅಕ್ಟೋಬರ್ 23 ರವರೆಗೆ ವಿಮಾನ ಟಿಕೇಟ್ ಕಾಯ್ದಿರಿಸುವವರ ಡ್ರಾ ಅಕ್ಟೋಬರ್ 25 ರಂದು ನಡೆಯಲಿದ್ದರೆ, ಮೂರನೇ ಹಂತದಲ್ಲಿ ಅಕ್ಟೋಬರ್ 24 ರಿಂದ ಅಕ್ಟೋಬರ್ 30 ರವರೆಗೆ ವಿಮಾನ ಟಿಕೇಟ್ ಕಾಯ್ದಿರಿಸುವವರಿಗೆ ನವೆಂಬರ್ 1 ರಂದು ಡ್ರಾ ನಡೆಯಲಿದೆ. ಏರ್ ಏಷ್ಯಾ ಅಧಿಕೃತ ವೆಬ್ ಸೈಟ್ ಗಳಲ್ಲಿ ಹಾಗೂ ಏರ್ ಏಷ್ಯಾ ಮೊಬೈಲ್ ಅಪ್ಲಿಕೇಶನ್ ನಲ್ಲಿ ವಿಮಾನ ಟಿಕೇಟ್ ಗಳನ್ನು ಬುಕ್ ಮಾಡಬೇಕಾಗಿದ್ದು, “I like AirAsia India because ____” ಎಂಬ ಘೋಷವಾಕ್ಯವನ್ನು ಪ್ರಯಾಣಿಕರು ಪೂರ್ಣಗೊಳಿಸಬೇಕಾಗುತ್ತದೆ. ಬಂಪರ್ ಬಹುಮಾನ ವಿಜೇತರಿಗೆ 250 ಗ್ರಾಂ ನ ಚಿನ್ನದ ನಾಣ್ಯ ನೀಡಲಾಗುತ್ತಿದ್ದು, ಹೆಚ್ಚಿನ ವಿವರಗಳಿಗೆ ಏರ್ ಏಷ್ಯಾ ವೆಬ್ ಸೈಟ್ ವೀಕ್ಷಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...