alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಯಾಣಿಕರ ವೇಳಾಪಟ್ಟಿ ಬದಲಿಸಲು ಏರ್ ಏಷ್ಯಾ ಸಮ್ಮತಿ

air asia 2334ಬೆಂಗಳೂರಲ್ಲಿ ಕಾವೇರಿ ಕಿಚ್ಚು ತಾರಕಕ್ಕೇರಿರುವುದರಿಂದ ವಿಮಾನ ಪ್ರಯಾಣಿಕರು ಕೂಡ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.

ಹಲವರು ಇಂದು ಕೆಂಪೇಗೌಡ ವಿಮಾನ ನಿಲ್ದಾಣದಿಂದ ತೆರಳಲು ಏರ್ ಟಿಕೆಟ್ ಬುಕ್ ಮಾಡಿದ್ದರು. ಆದ್ರೆ ಕೆಲ ಕಡೆಗಳಲ್ಲಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಅವರು ತಮ್ಮ ಪ್ರಯಾಣದ ವೇಳಾಪಟ್ಟಿಯನ್ನು ಯಾವುದೇ ವೆಚ್ಚವಿಲ್ಲದೆ ಬದಲಾಯಿಸಿಕೊಳ್ಳಲು ಏರ್ ಏಷ್ಯಾ ಅವಕಾಶ ಕಲ್ಪಿಸಿದೆ.

ಬೆಂಗಳೂರಿನಲ್ಲಿರುವ ಗಂಭೀರ ಪರಿಸ್ಥಿತಿಯನ್ನು ಏರ್ ಏಷ್ಯಾ ಅರ್ಥ ಮಾಡಿಕೊಂಡಿದೆ. ಪ್ರಯಾಣಿಕರು ತಮ್ಮ ಲಗೇಜ್ ಗಳೊಂದಿಗೆ ಏರ್ಪೋರ್ಟ್ ತಲುಪುವುದು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಗಾಗಿ ಇನ್ನು 72 ಗಂಟೆಗಳಲ್ಲಿ ಯಾವ ಸಮಯದಲ್ಲಾದ್ರೂ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರಯಾಣದ ವೇಳಾಪಟ್ಟಿ ಬದಲಾಯಿಸಿಕೊಳ್ಳಿ ಅಂತಾ ಏರ್ ಏಷ್ಯಾ ತಿಳಿಸಿದೆ. ಇಂದು ಬೆಂಗಳೂರಿನಿಂದ ಹೊರಡಲು ಟಿಕೆಟ್ ಬುಕ್ ಮಾಡಿದ್ದವರು, ವಿಮಾನ ನಿಲ್ದಾಣ ಸಿಬ್ಬಂದಿ ಅಥವಾ ಕಾಲ್ ಸೆಂಟರ್ ಗೆ ಕರೆ ಮಾಡಿ ತಮ್ಮ ಪ್ರಯಾಣದ ರೀ ಶೆಡ್ಯೂಲ್ ಮಾಡಿಸಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...