alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗುವಂತಿದೆ ಘೋಷಣೆಯಾದ ಕಪ್ಪು ಹಣದ ಮೊತ್ತ

arun-sun

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ, ಕಪ್ಪು ಹಣ ಘೋಷಣೆ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದೆ.

ಆದಾಯ ತೆರಿಗೆ ಇಲಾಖೆ ಜಾರಿಗೊಳಿಸಿದ್ದ ವಿಶೇಷ ಯೋಜನೆಯಡಿ ಕಳೆದ 4 ತಿಂಗಳ ಅವಧಿಯಲ್ಲಿ 65,250 ಕೋಟಿ ರೂ. ಕಪ್ಪು ಹಣ ಘೋಷಣೆಯಾಗಿದೆ. 64,275 ಕಾಳಧನಿಕರು ತಮ್ಮಲ್ಲಿರುವ ಕಪ್ಪುಹಣದ ಬಗ್ಗೆ ಘೋಷಿಸಿದ್ದು, ಬರೋಬ್ಬರಿ 65,250 ಕೋಟಿ ರೂ ಘೋಷಣೆಯಾಗಿದೆ. ಇದರಿಂದಾಗಿ ತೆರಿಗೆ ಮತ್ತು ದಂಡದ ರೂಪದಲ್ಲಿ ಸರ್ಕಾರಕ್ಕೆ 29,362 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಾಹಿತಿ ನೀಡಿದ್ದಾರೆ.

ಆನ್ ಲೈನ್ ಮತ್ತು ಆದಾಯ ತೆರಿಗೆ ಕಚೇರಿಗಳಲ್ಲಿ ಘೋಷಣೆ ಆಗಿರುವ ಮೊತ್ತ ಒಟ್ಟುಗೂಡಿಸಿದಾಗ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...