alex Certify
ಕನ್ನಡ ದುನಿಯಾ       Mobile App
       

Kannada Duniya

ಜನಸಾಮಾನ್ಯರಿಗೆ ಸಂಕಷ್ಟ- ಕಾಳಧನಿಕರಿಗೆ ಪೀಕಲಾಟ

money-nir-9

ದೇಶಾದ್ಯಂತ ಏಕಾಏಕಿ 500 ರೂ., 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿರುವುದರಿಂದ ಹಲವು ಪರಿಣಾಮ ಉಂಟಾಗಿವೆ.

ಕಾಳಧನಿಕರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಇದನ್ನು ಜಾರಿಗೆ ತಂದಿದ್ದರೂ, ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದೆ. ಪ್ರಧಾನಿ ಮೋದಿ, ರಾತ್ರಿ ಪ್ರಕಟಿಸಿದ ನಿರ್ಧಾರದಿಂದಾಗಿ, 500 ರೂ., 1000 ರೂ. ಹಣ ಇಟ್ಟುಕೊಂಡು ಖರೀದಿಗೆ ಹೋದ ಗ್ರಾಹಕರಿಗೆ ಏನೂ ಸಿಗುತ್ತಿಲ್ಲ. 500 ರೂ., 1000 ರೂ. ನೋಟು ಸ್ವೀಕರಿಸುತ್ತಿಲ್ಲ. ಬ್ಯಾಂಕ್ ಬಂದ್ ಇದೆ. ಪೋಸ್ಟ್ ಆಫೀಸ್ ಕೂಡ ಬಂದ್ ಮಾಡಲಾಗಿದೆ. ಇದರಿಂದಾಗಿ ತಮ್ಮಲ್ಲಿ ಒಂದೆರಡು ನೋಟುಗಳನ್ನಿಟ್ಟುಕೊಂಡ ಜನ ಪರಿತಪಿಸುವಂತಾಗಿದೆ.

ಎ.ಟಿ.ಎಂ. ಕೂಡ ಕಾರ್ಯ ನಿರ್ವಹಿಸುತ್ತಿಲ್ಲವಾದ ಕಾರಣ ಜನಸಾಮಾನ್ಯರು 2 ದಿನ ತೊಂದರೆ ಅನುಭವಿಸಬೇಕಿದೆ. ನೋಟು ಬದಲಾವಣೆ ಮಾಡಿಕೊಳ್ಳಲು ಕಷ್ಪಪಡಬೇಕಿದ್ದು, ಇದರಿಂದ ದೈನಂದಿನ ವ್ಯವಹಾರಗಳ ಮೇಲೆಯೂ ಪರಿಣಾಮ ಬೀರಲಿದೆ. ಆನ್ ಲೈನ್ ವ್ಯವಹಾರಗಳಿಗೆ ಅಡ್ಡಿಯಿಲ್ಲವಾದರೂ, ಜನಸಾಮಾನ್ಯರಿಗೆ ಇದು ಗೊತ್ತಿಲ್ಲದ ವಿಷಯವಾಗಿರುವುದರಿಂದ 2 ದಿನ ತೊಂದರೆ ಅನಿವಾರ್ಯ.

ಜನಸಾಮಾನ್ಯರದು ಈ ಸ್ಥಿತಿ ಆದರೆ, ಕಾಳಧನಿಕರಿಗೆ ಪೀಕಲಾಟ ಶುರುವಾಗಿದೆ. ಬ್ಲಾಕ್ ಮನಿ ಬಿಸಿ ತುಪ್ಪದಂತಾಗಿದ್ದು, ನುಂಗಲು ಆಗದೇ, ಉಗುಳಲು ಆಗದೇ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಏಕಾಏಕಿ ನೋಟು ಚಲಾವಣೆ ರದ್ದುಪಡಿಸಿದ್ದರಿಂದ ಹೂಡಿಕೆ ಮಾಡಲು ಕೂಡ ಅವಕಾಶ ಸಿಕ್ಕಿಲ್ಲ. ನೋಟು ಬದಲಾಯಿಸಿಕೊಳ್ಳಲು ಮಿತಿ ಇದೆ. ದಾಖಲೆ ಸಲ್ಲಿಸಬೇಕಿದೆ. ಇವೆಲ್ಲಾ ಕಾರಣಗಳಿಂದ ಕಾಳಧನಿಕರಿಗೆ ಪೀಕಲಾಟ ಶುರುವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...