alex Certify
ಕನ್ನಡ ದುನಿಯಾ       Mobile App
       

Kannada Duniya

10 ದಿನದಲ್ಲೇ 10 ಮಿಲಿಯನ್ ಡೌನ್ ಲೋಡ್ ಆಗಿದೆ ಈ ಆಪ್

bhimmmm

ನವದೆಹಲಿ: ಕಳೆದ ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ ಇ ವ್ಯಾಲೆಟ್ ‘ಭೀಮ್’ ಆಪ್ ಡೌನ್ ಲೋಡ್ ನಲ್ಲಿ ದಾಖಲೆ ಬರೆದಿದೆ.

ಭಾರತ್ ಇಂಟರ್ ಫೇಸ್ ಫಾರ್ ಮೊಬೈಲ್(BHIM) ಗೂಗಲ್ ಪ್ಲೇ ಸ್ಟೋರ್ ನಿಂದ 10 ದಿನಗಳಲ್ಲಿ 10 ಮಿಲಿಯನ್ ಗೂ ಅಧಿಕ ಡೌನ್ ಲೋಡ್ ಆಗಿದೆ.

ನೋಟ್ ಬ್ಯಾನ್ ಬಳಿಕ ಕ್ಯಾಶ್ ಲೆಸ್ ವಹಿವಾಟಿಗೆ ಉತ್ತೇಜನ ನೀಡಲಾಗುತ್ತಿದೆ. ಇದರ ಭಾಗವಾಗಿ ರೂಪಿಸಿದ ಭೀಮ್ ಆಪ್ 10 ದಿನಗಳ ಅವಧಿಯಲ್ಲಿ 10 ಮಿಲಿಯನ್ ಗೂ ಅಧಿಕ ಸಲ ಡೌನ್ ಲೋಡ್ ಆಗಿದೆ.

ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ ಆಧಾರಿತ ಆಪ್ ಇದಾಗಿದ್ದು, ಸುಲಭವಾಗಿ ಹಣ ಸಂದಾಯ ಮಾಡಬಹುದಾಗಿದೆ.

ಇದು ಬಿಡುಗಡೆಯಾದ 3 ದಿನಗಳಲ್ಲೇ ಸರಾಸರಿ 4.1 ರೇಟಿಂಗ್ ನೊಂದಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮೊದಲ ಸ್ಥಾನದೊಂದಿಗೆ ಜನಪ್ರಿಯ ಆಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಭೀಮ್ ಆಪ್ 10 ಮಿಲಿಯನ್ ಗೂ ಅಧಿಕ ಡೌನ್ ಲೋಡ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...