alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಪರ್ ಆಫರ್! ಏರ್ ಟೆಲ್ ಗ್ರಾಹಕರಿಗೆ 1000 GB ಡೇಟಾ ಫ್ರೀ

Gurgaon : The Airtel office which was raided by a team of CBI in connection with 2G scam in Gurgaon on Saturday. PTI Photo (PTI11_19_2011_000081A)

ನವದೆಹಲಿ: ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಮುಂದಾಗಿರುವ ಏರ್ ಟೆಲ್ ಬಂಪರ್ ಆಫರ್ ಘೋಷಿಸಿದ್ದು, ಆಯ್ದ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ 1000 ಜಿ.ಬಿ. ಡೇಟಾ ಉಚಿತವಾಗಿ ಸಿಗಲಿದೆ.

750 ಹಾಗೂ 1000 ಜಿ.ಬಿ. ಬೋನಸ್ ಡೇಟಾ ಪ್ಲಾನ್ ಇದಾಗಿದ್ದು, ಆನ್ ಲೈನ್ ನಲ್ಲಿ ಬ್ರಾಡ್ ಬ್ಯಾಂಡ್ ಪಡೆಯುವ ಗ್ರಾಹಕರಿಗೆ ಅನ್ವಯಿಸುತ್ತದೆ.

ಸದ್ಯ ದೆಹಲಿ ಸರ್ಕಲ್ ಗೆ ಮಾತ್ರ ಇದನ್ನು ಪರಿಚಯಿಸಿದ್ದು, ಮುಂದಿನ ಹಂತದಲ್ಲಿ ಎಲ್ಲಾ ನಗರಗಳಿಗೂ ವಿಸ್ತರಿಸಲಾಗುತ್ತದೆ.

899 ರೂ.ನಿಂದ ಈ ಪ್ಲಾನ್ ಆರಂಭವಾಗಲಿದ್ದು, 1 ತಿಂಗಳ ಅವಧಿಯಲ್ಲಿ ಅನಿಯಮಿತ ಎಸ್.ಟಿ.ಡಿ. ಕರೆ ಸೌಲಭ್ಯ, ಜೊತೆಗೆ 16 ಎಂ.ಬಿ.ಪಿ.ಎಸ್. ವೇಗದಲ್ಲಿ 60 ಜಿ.ಬಿ. ಡೇಟಾ ಸಿಗಲಿದೆ. ಅಲ್ಲದೇ ತಿಂಗಳಿಗೆ 65 ಜಿ.ಬಿ. ಒಳಗೊಂಡು ವರ್ಷಕ್ಕೆ 750 ಜಿ.ಬಿ. ಬೋನಸ್ ಡೇಟಾ ಪಡೆಯಬಹುದಾಗಿದೆ.

1000 ಜಿ.ಬಿ. ಬೋನಸ್ ಡೇಟಾ ಸೌಲಭ್ಯವನ್ನು ಪಡೆಯಲು ಕೂಡ ಅವಕಾಶವಿದೆ. ಇದಕ್ಕಾಗಿ 40 ಎಂ.ಬಿ.ಪಿ.ಎಸ್. ವೇಗದ 90 ಜಿ.ಬಿ. ಡೇಟಾ ಒಳಗೊಂಡ 1099 ರೂ., 100 ಎಂ.ಬಿ.ಪಿ.ಎಸ್. ಸ್ಪೀಡ್ ನ 125 ಜಿ.ಬಿ. ಡೇಟಾ ಇರುವ 1299 ರೂ ಪ್ಲಾನ್, 100 ಎಂ.ಬಿ.ಪಿ.ಎಸ್. ವೇಗದ 160 ಜಿ.ಬಿ. ಡೇಟಾ ಇರುವ 1499 ರೂ. ಪ್ಲಾನ್, 100 ಎಂ.ಬಿ.ಪಿ.ಎಸ್. ವೇಗದ 220 ಜಿ.ಬಿ.ಯ 1799 ರೂ. ಯೋಜನೆ ಅಳವಡಿಸಿಕೊಳ್ಳಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...