alex Certify
ಕನ್ನಡ ದುನಿಯಾ       Mobile App
       

Kannada Duniya

ಏ. 1ರ ವರೆಗೆ ರಜಾ ದಿನದಲ್ಲೂ ಕೆಲಸ ನಿರ್ವಹಿಸಲಿವೆ ಬ್ಯಾಂಕ್

bank_h0ca4jq

ಬ್ಯಾಂಕ್ ಗ್ರಾಹಕರಿಗೊಂದು ಖುಷಿ ಸುದ್ದಿ. ಮುಂದಿನ ವಾರ ಯುಗಾದಿ ರಜಾ ಬಂದಿದೆ. ನಾಳೆ ಭಾನುವಾರ. ಹೇಗಪ್ಪ ಬ್ಯಾಂಕ್ ಕೆಲಸ ಮಾಡಿಕೊಳ್ಳೋದು ಎಂಬ ಚಿಂತೆ ಬೇಡ. ಮಾರ್ಚ್ 26ರಿಂದ ಏಪ್ರಿಲ್ 1ರವರೆಗೂ ಬ್ಯಾಂಕ್ ಬಾಗಿಲು ತೆರೆದಿರಲಿದೆ. ಬ್ಯಾಂಕ್ ಎಂದಿನಂತೆ ಕೆಲಸ ನಿರ್ವಹಿಸಲಿದೆ.

ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕ ಕ್ಷೇತ್ರದ ಎಲ್ಲ ಬ್ಯಾಂಕ್ ಹಾಗೂ ಕೆಲವು ಖಾಸಗಿ ವಲಯದ ಬ್ಯಾಂಕ್ ಗಳಿಗೆ ಮಾರ್ಚ್ 26ರಿಂದ ಏಪ್ರಿಲ್ 1ವರೆಗೆ ಎಂದಿನಂತೆ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದೆ. ಹಣಕಾಸು ವರ್ಷ ಕೊನೆಯಾಗುವ ಹಿನ್ನೆಲೆಯಲ್ಲಿ ತೆರಿಗೆ ಪಾವತಿ ಹಾಗೂ ವಿವಿಧ ಸರ್ಕಾರಿ ಶುಲ್ಕ ಸಂಗ್ರಹವಾಗುವುದನ್ನು ಗಮನದಲ್ಲಿಟ್ಟುಕೊಂಡು ಆರ್ ಬಿಐ ಈ ನಿರ್ಧಾರ ಕೈಗೊಂಡಿದೆ.

ಶನಿವಾರ, ಭಾನುವಾರ ಸೇರಿದಂತೆ ಎಲ್ಲ ರಜಾ ದಿನದಲ್ಲಿಯೂ ಬ್ಯಾಂಕ್ ಕೆಲಸ ಮಾಡಲಿದೆ. ಆರ್ ಬಿಐಗೆ ಸಂಬಂಧಿಸಿದ ಎಲ್ಲ ವಿಭಾಗಗಳೂ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...