alex Certify
ಕನ್ನಡ ದುನಿಯಾ       Mobile App
       

Kannada Duniya

ವಾಸನೆ ಬರ್ತಿರುವ ಹಳೆ ನೋಟಿಗೆ ಸೆಂಟ್ ಹಾಕ್ತಿದೆ ಬ್ಯಾಂಕ್..!

indian-currency

ನೋಟು ನಿಷೇಧದ ನಂತ್ರ ಬ್ಯಾಂಕ್ ಗಳು ಬಡವಾಗಿವೆ. ಕೆಲವು ಕಡೆ ಬ್ಯಾಂಕ್ ಗ್ರಾಹಕರಿಗೆ ಹಳೆಯ, ವಾಸನೆ ಬರುತ್ತಿರುವ ನೋಟುಗಳನ್ನು ನೀಡ್ತಾ ಇದೆ. ಅಲ್ಪಸ್ವಲ್ಪ ಹರಿದಿರುವ, ವಾಸನೆ ಬರ್ತಾ ಇರುವ ನೋಟುಗಳಿಗೆ ಸೆಂಟ್ ಹಾಕಿ ಗ್ರಾಹಕರಿಗೆ ಕೊಡಲಾಗ್ತಿದೆ. ದೆಹಲಿ ಸೇರಿದಂತೆ ಅನೇಕ ಕಡೆ ಬ್ಯಾಂಕ್ ಗಳು ಇಂತ ನೋಟುಗಳನ್ನು ನೀಡ್ತಾ ಇದ್ದು, ಇದು ಗ್ರಾಹಕರ ನೋವನ್ನು ಮತ್ತಷ್ಟು ಹೆಚ್ಚಿಸಿದೆ.

ಆರ್ ಬಿ ಐ ಹಳೆಯ, ಅನೇಕ ವರ್ಷಗಳಿಂದ ಉಪಯೋಗಿಸದೆ ಕಟ್ಟಿಟ್ಟ, ವಾಸನೆ ಬರುವ ನೋಟುಗಳನ್ನು ನಮಗೆ ನೀಡಿದೆ. ಅದಕ್ಕೆ ಸೆಂಟ್ ಸಿಂಪಡಿಸಿ ನಾವು ಗ್ರಾಹಕರಿಗೆ ನೀಡ್ತಿದ್ದೇವೆ ಎಂದು ಬ್ಯಾಂಕ್ ಮ್ಯಾನೇಜರ್ ಒಬ್ಬರು ಹೇಳಿದ್ದಾರೆ.

500 ಹಾಗೂ 1000 ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ ನಂತ್ರ ನೋಟಿನ ಸಮಸ್ಯೆ ಎದುರಾಗದಿರಲೆಂದು ಆರ್ ಬಿ ಐ 100 ರ ನೋಟುಗಳನ್ನು ಬ್ಯಾಂಕ್ ಗಳಿಗೆ ನೀಡಿದೆ. ಆದ್ರೆ ಈ ನೋಟುಗಳು ತುಂಬಾ ಹಳೆಯದಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ ಎಂದಿದ್ದಾರೆ ಮ್ಯಾನೇಜರ್.

ಸಾಮಾನ್ಯವಾಗಿ ಗ್ರಾಹಕರ ಬಳಿ ಇರುವ ಹಳೆ ನೋಟುಗಳನ್ನು ಬ್ಯಾಂಕ್ ಪಡೆಯುತ್ತದೆ. ನಂತ್ರ ಬ್ಯಾಂಕ್ ಆರ್ ಬಿ ಐ ಗೆ ರವಾನಿಸುತ್ತದೆ. ಹಳೆ ನೋಟುಗಳನ್ನು ಆರ್ ಬಿ ಐ ನಷ್ಟಗೊಳಿಸುತ್ತದೆ. ಆದ್ರೆ ಅನೇಕ ವರ್ಷಗಳಿಂದ ಆರ್ ಬಿ ಐ ಹಳೆ ನೋಟುಗಳನ್ನು ನಷ್ಟಗೊಳಿಸಿಲ್ಲ. ಮೂಟೆ ಕಟ್ಟಿದ್ದ ಹಣವೆಲ್ಲ ಈಗ ಹೊರಬರ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...