alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯಮಕ್ಕಾಗಿ ಸಾಲ ಬೇಕಿದ್ರೆ ಮೊದಲು ಈ ಬ್ಯಾಂಕ್ ಸಂಪರ್ಕಿಸಿ

ಅತ್ಯಧಿಕ ಯುವಜನತೆಗೆ ಉದ್ಯೋಗ ನೀಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಎಂಪ್ಲಾಯ್ಮೆಂಟ್ ಜನರೇಷನ್ ಕಾರ್ಯಕ್ರಮ ತನ್ನ ಗುರಿಯನ್ನು ವಿಸ್ತರಿಸಿದೆ. ಎಲ್ಲರೂ ಈ ಕಾರ್ಯಕ್ರಮದ ಪ್ರಯೋಜನ ಪಡೆದು ಸ್ವಂತ ಉದ್ಯೋಗ ಶುರುಮಾಡಬಹುದಾಗಿದೆ. ಈ ಯೋಜನೆಯಡಿ ಬ್ಯಾಂಕ್ ಯಾವುದೇ ಭದ್ರತೆಯಿಲ್ಲದೆ ಸುಲಭವಾಗಿ ನಿಮಗೆ ಸಾಲ ನೀಡುತ್ತದೆ.

ಎಲ್ಲ ಬ್ಯಾಂಕ್ ಗಳೂ ಈ ಯೋಜನೆಯಡಿ ಸುಲಭವಾಗಿ ಸಾಲ ನೀಡುವುದಿಲ್ಲ. ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಯಾವ ಬ್ಯಾಂಕ್ ಸುಲಭವಾಗಿ ಸಾಲ ನೀಡುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳುವುದು ಒಳ್ಳೆಯದು. ಪ್ರಧಾನ ಮಂತ್ರಿ ಎಂಪ್ಲಾಯ್ಮೆಂಟ್ ಜನರೇಷನ್ ಕಾರ್ಯಕ್ರಮದಡಿ ಉದ್ಯೋಗ ಶುರುಮಾಡುವ ಮುನ್ನ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಅರ್ಜಿಯಲ್ಲಿ ಯಾವ ಬ್ಯಾಂಕ್ ನಿಂದ ಸಾಲ ಪಡೆಯುತ್ತೀರಾ ಎಂಬುದನ್ನು ನೀವು ನಮೂದಿಸಬೇಕಾಗುತ್ತದೆ.

ನೀವು ಬ್ಯಾಂಕ್ ಆಫ್ ಮಹಾರಾಷ್ಟ್ರಗೆ ಮೊದಲು ಆಧ್ಯತೆ ನೀಡುವುದು ಒಳ್ಳೆಯದು. ಈ ಯೋಜನೆಯಡಿಯಲ್ಲಿ ಸಾಲ ನೀಡುವ ಉಳಿದ ಬ್ಯಾಂಕ್ ಗಳಿಗೆ ಹೋಲಿಸಿದ್ರೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿದೆ.

ಎಲ್ಲವನ್ನು ಪರಿಗಣಿಸಿದ್ರೆ ಬ್ಯಾಂಕ್ ಆಫ್ ಮಹಾರಾಷ್ಟ್ರ ದಾಖಲೆ ಚೆನ್ನಾಗಿಲ್ಲ. ಆದ್ರೆ ಯುವಕರಿಗೆ ಸಾಲ ನೀಡುವ ವಿಷ್ಯದಲ್ಲಿ ಒಳ್ಳೆ ಕೆಲಸ ಮಾಡ್ತಿದೆ. ವಿಜಯ ಬ್ಯಾಂಕ್ ನಲ್ಲಿ ಕೂಡ ನೀವು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಬ್ಯಾಂಕ್ ಶೇಕಡಾ 7.21ರಷ್ಟು ತನ್ನ ಗುರಿ ತಲುಪಿದೆ.

ಸಾಲ ಪಡೆಯುವ ವೇಳೆ ಸಾಮಾನ್ಯವಾಗಿ ಎಲ್ಲರೂ ರಾಷ್ಟ್ರೀಕೃತ ಬ್ಯಾಂಕ್ ಮೇಲೆ ಹೆಚ್ಚಿನ ಗಮನ ನೀಡ್ತಾರೆ. ಆದ್ರೆ ಸ್ಥಳೀಯ ಬ್ಯಾಂಕ್ ಗಳ ಬಗ್ಗೆಯೂ ನೀವು ತಿಳಿದುಕೊಳ್ಳಬೇಕಾಗುತ್ತದೆ. ಗ್ರಾಮೀಣ ಹಾಗೂ ಪ್ರಾದೇಶಿಕ ಬ್ಯಾಂಕ್ ಗಳು ಈ ಯೋಜನೆಯಡಿ ಸಾಲ ನೀಡುವ ಅಂಕಿ-ಅಂಶದಲ್ಲಿ ಮುಂದಿದೆ. ತ್ರಿಪುರಾ ಗ್ರಾಮೀಣ್ ಬ್ಯಾಂಕ್, ಒರಿಸ್ಸಾ ಗ್ರಾಮೀಣ್ ಬ್ಯಾಂಕ್, ಪ್ರಗತಿ ಕೃಷ್ಣಾ ಗ್ರಾಮೀಣ್ ಬ್ಯಾಂಕ್, ಮಿಜೋರಾಂ ಗ್ರಾಮೀಣ ಬ್ಯಾಂಕ್ ಗಳು ಒಳ್ಳೆ ಟ್ರ್ಯಾಕ್ ರೆಕಾರ್ಡ್ ಹೊಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...