alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಅಧಿಕಾರಿ ವೃದ್ಧ ದಂಪತಿಗೆ ಮಾಡ್ದ 1.5 ಕೋಟಿ ರೂ. ವಂಚನೆ

ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಬ್ಯಾಂಕ್ ನ ರಿಲೇಶನ್ ಶಿಪ್ ಮ್ಯಾನೇಜರ್ ವೃದ್ಧ ದಂಪತಿಗೆ ಮೋಸ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮ್ಯಾನೇಜರ್ 1.5 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. ನಕಲಿ ದಾಖಲೆ ಬಳಸಿಕೊಂಡು ವೃದ್ಧರ ಖಾತೆಯಿಂದ 1.5 ಕೋಟಿ ರೂಪಾಯಿ ಲಪಟಾಯಿಸಿದ್ದಾನೆ.

2011 ರಲ್ಲಿ ಬ್ಯುಸಿನೆಸ್ ಮಾರಾಟ ಮಾಡಿ ಬಂದ ಹಣವನ್ನು ಬ್ಯಾಂಕ್ ಖಾತೆಯಲ್ಲಿಟ್ಟಿದ್ದರು ದಂಪತಿ. ಬ್ಯಾಂಕ್ ನಲ್ಲಿ ಮೂರು ಉಳಿತಾಯ ಖಾತೆಗಳಿವೆ. ಹಿರಿಯ ನಾಗರಿಕರಾಗಿರುವ ಕಾರಣ ಬ್ಯಾಂಕ್, ವೃದ್ಧರ ಮನೆಗೆ ಬ್ಯಾಂಕ್ ಸೇವೆ ನೀಡ್ತಾಯಿತ್ತು. ಮ್ಯಾನೇಜರ್ ಆಗಾಗ ಬಂದು ಹೋಗ್ತಿದ್ದ ಎನ್ನಲಾಗಿದೆ. 2018ರಲ್ಲಿ ಇನ್ಶುರೆನ್ಸ್ ಕಂಪನಿಯಿಂದ ಕರೆ ಬಂದಿದೆ. ಪತ್ನಿ ಹೆಸರಿನಲ್ಲಿ ಇನ್ಶುರೆನ್ಸ್ ಶುರು ಮಾಡಿರುವುದಕ್ಕೆ ಧನ್ಯವಾದ ಹೇಳಿದ್ದಾರೆ.

ಇದ್ರಿಂದ ಅನುಮಾನಗೊಂಡ ವೃದ್ಧರು ಬ್ಯಾಂಕ್ ರಿಲೇಶನ್ ಶಿಪ್ ಮ್ಯಾನೇಜರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆರಂಭದಲ್ಲಿ ಒಪ್ಪಿಕೊಳ್ಳದ ವ್ಯಕ್ತಿ ಕೊನೆಯಲ್ಲಿ ಇನ್ಶುರೆನ್ಸ್ ಶುರು ಮಾಡಿದ್ದೇನೆ. ಕೆಲವೇ ದಿನಗಳಲ್ಲಿ ಹಣ ವಾಪಸ್ ಬರಲಿದೆ ಎಂದಿದ್ದಾನೆ. ಅನುಮಾನಗೊಂಡ ವ್ಯಕ್ತಿ ಖಾತೆಯಲ್ಲಿರುವ ಹಣ ಪರೀಕ್ಷೆ ಮಾಡಿದಾಗ ದಂಗಾಗಿದ್ದಾರೆ. ಅನೇಕ ಬಾರಿ ದೊಡ್ಡ ಮೊತ್ತದ ಹಣ ಖಾತೆಯಿಂದ ಡ್ರಾ ಆಗಿದೆ. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...