alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್..! 500 ರೂ.ಗೆ ಮಾರಾಟಕ್ಕಿದೆ ಭಾರತೀಯರ ಬ್ಯಾಂಕ್ ವಿವರ

ಮಧ್ಯಪ್ರದೇಶದ ಸೈಬರ್ ಕ್ರೈಂ ಪೊಲೀಸರು ಆಘಾತಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಭಾರತೀಯರ ಬ್ಯಾಂಕಿಂಗ್ ವಿವರಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕೆ ಇಡಲಾಗಿದೆಯಂತೆ. ಸಿವಿವಿ ನಂಬರ್, ಫೋನ್ ನಂಬರ್, ಇಮೇಲ್ ಅಡ್ರೆಸ್ ಇವನ್ನೆಲ್ಲ ವೆಬ್ ಸೈಟ್ ಒಂದ್ರಲ್ಲಿ ಕೇವಲ 500 ರೂಪಾಯಿಗೆ ಮಾರಾಟಕ್ಕಿಡಲಾಗಿದೆ.

ಅಂತರಾಷ್ಟ್ರೀಯ ಹ್ಯಾಕರ್ ಗಳ ಗ್ಯಾಂಗ್ ಒಂದನ್ನು ಹಿಡಿದ ಪೊಲೀಸರಿಗೆ ಈ ಶಾಕಿಂಗ್ ಮಾಹಿತಿ ಲಭ್ಯವಾಗಿದೆ. ಈ ಗ್ಯಾಂಗ್ ನ ರೂವಾರಿ ಪಾಕಿಸ್ತಾನದ ಪ್ರಜೆ. ಆತ ಲಾಹೋರ್ ನಿಂದ್ಲೇ ಅಕ್ರಮ ದಂಧೆ ನಡೆಸ್ತಾ ಇದ್ದ. ಆಗಸ್ಟ್ 28ರಂದು ಜೈಕಿಶನ್ ಗುಪ್ತಾ ಎಂಬುವವರ ಕ್ರೆಡಿಟ್ ಕಾರ್ಡ್ ನಿಂದ 74,401 ರೂಪಾಯಿ ಡೆಬಿಟ್ ಆಗಿತ್ತು.

ಈ ಬಗ್ಗೆ ಜೈಕಿಶನ್ ಪೊಲೀಸರಿಗೆ ದೂರು ನೀಡಿದ್ದರು. ಜೈಕಿಶನ್ ದಾಖಲಿಸಿದ್ದ ಪ್ರಕರಣದ ತನಿಖೆ ವೇಳೆ ಪೊಲೀಸರು ಈ ಗ್ಯಾಂಗ್ ನಡೆಸ್ತಾ ಇದ್ದ ಅಕ್ರಮವನ್ನು ಪತ್ತೆ ಮಾಡಿದ್ದಾರೆ. ಮುಂಬೈನ ರಾಜ್ ಕುಮಾರ್ ಪಿಳ್ಳೈ ಎಂಬಾತನಿಗೆ ವಿಮಾನದ ಟಿಕೆಟ್ ಖರೀದಿಸಲು ಜೈಕಿಶನ್ ಕಾರ್ಡ್ ನಿಂದ ಹಣ ಬಳಸಲಾಗಿತ್ತು.

ಪಿಳ್ಳೈ, ಕಾಗ್ನಿಜಂಟ್ ಕಂಪನಿಯ ಮಾಜಿ ಉದ್ಯೋಗಿ. ಈತನ ಸಹಚರ ರಾಮ್ ಪ್ರಸಾದ್ ನದರ್ ಎಂಬಾತ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿದ್ದ. ಇಬ್ಬರೂ ಸೇರಿ ಅಂತರಾಷ್ಟ್ರೀಯ ವೆಬ್ ಸೈಟ್ ಗಳಲ್ಲಿ ಯಾರದ್ದೋ ಕಾರ್ಡ್ ಗಳನ್ನು ಸ್ವೈಪ್ ಮಾಡುತ್ತಿದ್ರು. ಅಲ್ಲಿ ಓಟಿಪಿ ಅಗತ್ಯವಿಲ್ಲದೇ ಇರುವುದರಿಂದ ಇವರ ಕೆಲಸ ಸಲೀಸಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...