alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ಜನಿಸಿದ ಮಗುವಿಗೆ ಹೊಡೀತು ಜಾಕ್ ಪಾಟ್

vima-magu

ನವದೆಹಲಿ: ವಿಮಾನದಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಈ ಅನಿರೀಕ್ಷಿತ ಅತಿಥಿಗೆ ಸಂಸ್ಥೆಯಿಂದ ಲೈಫ್ ಟೈಮ್ ಫ್ರೀ ಏರ್ ಟಿಕೆಟ್ ನೀಡುವುದಾಗಿ ಘೋಷಿಸಲಾಗಿದೆ.

ಸೌದಿ ಅರೇಬಿಯಾದಿಂದ ಭಾರತಕ್ಕೆ ಬರುತ್ತಿದ್ದ ಜೆಟ್ ಏರ್ ವೇಸ್ ವಿಮಾನದಲ್ಲಿ ಮಾರ್ಗಮಧ್ಯದಲ್ಲೇ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

ಪ್ರಯಾಣಿಕರಲ್ಲಿ ಯಾರಾದರೂ ವೈದ್ಯರಿದ್ದರೆ ಸಹಾಯ ಮಾಡುವಂತೆ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಮನವಿ ಮಾಡಿದ್ದಾರೆ. ಆದರೆ, ಯಾರೂ ವೈದ್ಯರಿಲ್ಲದ ಕಾರಣ ವಿಲ್ಸನ್ ಎಂಬಾತ ತಾನು ನೆರವಾಗುವುದಾಗಿ ಹೇಳಿದ್ದಾನೆ.

ಸಂಸ್ಥೆಯ ಸಿಬ್ಬಂದಿಯೊಂದಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದು, 35,000 ಅಡಿ ಎತ್ತರದಲ್ಲಿ ಅರಬ್ಬೀ ಸಮುದ್ರದ ಮೇಲೆ ಹಾರಾಟದಲ್ಲಿದ್ದ ವಿಮಾನದಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ.

ಕೊಚ್ಚಿಗೆ ತೆರಳಬೇಕಿದ್ದ ವಿಮಾನ ಮುಂಬೈಗೆ ಪ್ರಯಾಣ ಬೆಳೆಸಿದೆ. ಮುಂಬೈನಲ್ಲಿ ಇಳಿದ ಕೂಡಲೇ ತಾಯಿ, ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ. ವಿಮಾನದಲ್ಲಿ ಜನಿಸಿದ ಮಗುವಿಗೆ ಲೈಫ್ ಟೈಮ್ ಫ್ರೀ ಟಿಕೆಟ್ ನೀಡುವುದಾಗಿ ಜೆಟ್ ಏರ್ ವೇಸ್ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...