alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯದಲ್ಲಿಯೇ ಏರಿಕೆಯಾಗಲಿದೆ ಎಟಿಎಂ ಹಣ ಡ್ರಾ ಮಿತಿ

atm_l1brrge

ಎಟಿಎಂನಿಂದ ಒಂದೇ ಬಾರಿ 24 ಸಾವಿರ ರೂಪಾಯಿಯನ್ನು ಡ್ರಾ ಮಾಡುವ ಅವಕಾಶ ಸದ್ಯದಲ್ಲಿಯೇ ಗ್ರಾಹಕರಿಗೆ ಸಿಗಲಿದೆ. ಬ್ಯಾಂಕ್ ಗಳಲ್ಲಿ ವಾರವೊಂದಕ್ಕೆ 24 ಸಾವಿರ ರೂಪಾಯಿ ಡ್ರಾ ಮಾಡಬಹುದು. ಈಗ ಎಟಿಎಂನಲ್ಲಿಯೂ ಹಣ ಡ್ರಾ ಮಿತಿ ಏರಿಸುವ ಚಿಂತನೆಯಲ್ಲಿದೆ ಮೋದಿ ಸರ್ಕಾರ.

ಮಾಧ್ಯಮಗಳ ವರದಿ ಪ್ರಕಾರ, ಮೋದಿ ಸರ್ಕಾರ ಶೀಘ್ರ ಬ್ಯಾಂಕ್ ಗಳಂತೆಯೇ ಎಟಿಎಂಗಳಲ್ಲಿ ಕೂಡ 24 ಸಾವಿರ ರೂಪಾಯಿ ಡ್ರಾ ಮಾಡಲು ಅವಕಾಶ ನೀಡಲಿದೆ. ಸದ್ಯ ಎಟಿಎಂನಿಂದ ಪ್ರತಿದಿನ 10 ಸಾವಿರ ರೂಪಾಯಿ ಡ್ರಾ ಮಾಡಲು ಅವಕಾಶವಿದೆ. ಆದ್ರೆ ವಾರದ ಮಿತಿಯಲ್ಲಿ ಏರಿಕೆ ಇಲ್ಲ. ಅದು 24 ಸಾವಿರ ರೂಪಾಯಿಯೇ ಇರಲಿದೆ ಎಂದು ಮೂಲಗಳು ಹೇಳಿವೆ.

ಎಟಿಎಂ ಮುಂದೆ ನಿಲ್ತಾ ಇದ್ದ ಕ್ಯೂ ಕಡಿಮೆಯಾಗಿದೆ. ಹಾಗೆ ಎಟಿಎಂಗಳಿಗೆ ಹೆಚ್ಚು ಮೊತ್ತದ ಹಣವನ್ನು ಹಾಕಲಾಗ್ತಾ ಇದೆ. ಕಳೆದ ಐದು ದಿನಗಳಿಂದ ಎಟಿಎಂನಲ್ಲಿ ನವೆಂಬರ್ 8ರ ನಂತ್ರ ಅತಿ ಹೆಚ್ಚು ಮೊತ್ತವನ್ನು ಹಾಕಲಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಹಣದ ಚಲಾವಣೆ ನಿಧಾನವಾಗಿ ಸುಧಾರಿಸುತ್ತಿದ್ದು ಮಿತಿಯನ್ನು ಏರಿಸಲು ಸರ್ಕಾರ ಚಿಂತನೆ ನಡೆಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...