alex Certify
ಕನ್ನಡ ದುನಿಯಾ       Mobile App
       

Kannada Duniya

ನವೆಂಬರ್ 11ರಿಂದ ಎಟಿಎಂನಲ್ಲಿ ಸಿಗಲಿದೆ ಹೊಸ ನೋಟು

note_u9gvewg

500 ಹಾಗೂ 1000 ಮುಖ ಬೆಲೆಯ ನೋಟುಗಳ ಚಲಾವಣೆ ಬಂದ್ ಆಗಿರುವ ಬಗ್ಗೆ ಶ್ರೀಸಾಮಾನ್ಯರು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನವೆಂಬರ್ 11 ರಿಂದ 500 ಹಾಗೂ 2 ಸಾವಿರ ಮುಖಬೆಲೆಯ ಒಂದೊಂದು ನೋಟುಗಳು ಎಟಿಎಂ ನಿಂದ ಹೊರಬರಲಿವೆ.

ನವೆಂಬರ್ 11 ರಿಂದ 500 ಹಾಗೂ 2000 ಮುಖಬೆಲೆಯ ನೋಟುಗಳು ಎಟಿಎಂನಲ್ಲಿ ಸಿಗಲಿವೆ ಎಂದು ಹಣಕಾಸು ಕಾರ್ಯದರ್ಶಿ ಅಶೋಕ್ ಲವಾಸಾ ತಿಳಿಸಿದ್ದಾರೆ. ಹೊರ ಬರ್ತಾ ಇರುವ ಹೊಸ ನೋಟುಗಳ ಬಗ್ಗೆ ಆರ್ ಬಿ ಐ ಮೇಲ್ವಿಚಾರಣೆ ನಡೆಸಲಿದೆ. ಆರಂಭದಲ್ಲಿ ಜನರಿಗೆ ಸ್ವಲ್ಪ ಗೊಂದಲವಾಗುವ ಸಾಧ್ಯತೆ ಇದೆ. ಆದ್ರೆ ತೊಡಕುಗಳನ್ನು ತೊಡೆದುಹಾಕಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...