alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ಫೋನ್ ಬ್ಯಾಟರಿ ಚಾರ್ಜ್ ಇಳಿಯಲು ಇದು ಕಾರಣ

download

ಸಾಮಾನ್ಯವಾಗಿ ಎಲ್ಲರ ಸ್ಮಾರ್ಟ್ಫೋನ್ ನಲ್ಲಿ ಫೇಸ್ಬುಕ್ ಅಪ್ಲಿಕೇಷನ್ ಡೌನ್ಲೋಡ್ ಆಗಿರುತ್ತೆ. ಈ ಫೇಸ್ಬುಕ್ ಆ್ಯಪ್ ನಿಮ್ಮ ಬ್ಯಾಟರಿ ತಿನ್ನೋದ್ರಲ್ಲಿ ಮಹತ್ವದ ಪಾತ್ರವಹಿಸುತ್ತೆ. ದಿ ಇಂಡಿಪೆಂಡೆಂಟ್ ನಲ್ಲಿ ಬಂದ ಮಾಹಿತಿ ಪ್ರಕಾರ ಫೇಸ್ಬುಕ್ ಅಪ್ಲಿಕೇಷನ್ ಗೆ ಅತಿ ಹೆಚ್ಚು ಬ್ಯಾಟರಿ ಬೇಕಂತೆ. ಸ್ಮಾರ್ಟ್ಫೋನ್ ಆನ್ ಮಾಡ್ತಿದ್ದಂತೆ ತಾನಾಗಿಯೇ ಫೇಸ್ಬುಕ್ ಆ್ಯಪ್ ವರ್ಕ್ ಆಗಲು ಶುರುವಾಗುತ್ತದೆ.

ಫೇಸ್ಬುಕ್ ಜೊತೆಗೆ ನೆಟ್ಫಿಕ್ಸ್, ವಾಟ್ಸ್ಅಪ್, ಗೂಗಲ್ ಮ್ಯಾಪ್ ಕೂಡ ಹೆಚ್ಚು ಬ್ಯಾಟರಿ ತಿನ್ನುತ್ತಂತೆ. ಫೇಸ್ಬುಕ್ ಆ್ಯಪ್ ಬಳಸುವ ಬದಲು ವೆಬ್ ಬ್ರೌಸರ್ ನಲ್ಲಿ ಫೇಸ್ಬುಕ್ ಬಳಕೆ ಮಾಡಿ ಎಂದು ಈ ವರದಿಯಲ್ಲಿ ಸಲಹೆ ನೀಡಲಾಗಿದೆ. ಹಾಗೆ ಫೇಸ್ಬುಕ್ ಹೊರತುಪಡಿಸಿ ಯಾವ ಯಾವ ಅಪ್ಲಿಕೇಷನ್ ನಿಮ್ಮ ಮೊಬೈಲ್ ಬ್ಯಾಟರಿ ನುಂಗಿ ಹಾಕುತ್ತೆ ಎಂಬ ವಿವರವನ್ನೂ ವರದಿಯಲ್ಲಿ ನೀಡಲಾಗಿದೆ.

ವರದಿ ಪ್ರಕಾರ ನೆಟ್ಫಿಕ್ಸ್, Spot fame ಮ್ಯೂಜಿಕ್, ಸ್ಯಾಮ್ಸಂಗ್ ವೋಕನ್, ಸ್ಯಾಮ್ಸಂಗ್ ವಿಡಿಯೋ ಎಡಿಟರ್, ಸ್ನಾಪ್ಚ್ಯಾಟ್, ಕ್ಲೀನ್ ಮಾಸ್ಟರ್, ಲೈನ್:ಫ್ರೀ ಕಾಲ್ @ ಮೆಸ್ಸೇಜಸ್, ಮೈಕ್ರೋಸಾಫ್ಟ್ ಔಟ್ಲುಕ್ ಆ್ಯಪ್ ಗಳು ಮೊಬೈಲ್ ನಲ್ಲಿದ್ದರೆ ಹೆಚ್ಚು ಬ್ಯಾಟರಿ ಖರ್ಚಾಗುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...