alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳು ಮಾಡಿದ ತಪ್ಪಿಗೆ ಅಪ್ಪನಿಗೆ ಶಿಕ್ಷೆ ಕೊಟ್ಟಿದೆ ಆ್ಯಪಲ್ ಕಂಪನಿ

ಮಗಳ ಐಫೋನ್-ಎಕ್ಸ್ ವಿಡಿಯೋ ವೈರಲ್ ಆಗಿದ್ರಿಂದ ಆ್ಯಪಲ್ ಕಂಪನಿಯ ಉದ್ಯೋಗಿ ಕೆಲಸ ಕಳೆದುಕೊಂಡಿದ್ದಾನೆ. ಬ್ರೂಕೆ ಅಮೆಲಿಯಾ ಪೀಟರ್ಸನ್ ಎಂಬಾಕೆಯ ತಂದೆ ಆ್ಯಪಲ್ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ. ಸ್ಮಾರ್ಟ್ ಫೋನ್ ನ ವೈರ್ಲೆಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ.

ಬ್ರೂಕೆ ಐಫೋನ್ ಎಕ್ಸ್ ವಿಡಿಯೋ ಮಾಡಿ ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ಲು. ಅದು ವೈರಲ್ ಆಗಿತ್ತು. ಕೂಡಲೇ ಆ್ಯಪಲ್  ಕಂಪನಿ ಬ್ರೂಕೆ ತಂದೆಯನ್ನು ಕೆಲಸದಿಂದ ವಜಾ ಮಾಡಿದೆ. ಅಷ್ಟೇ ಅಲ್ಲ ಕೂಡಲೇ ಯುಟ್ಯೂಬ್ ನಿಂದ ಆ ವಿಡಿಯೋವನ್ನು ಡಿಲೀಟ್ ಮಾಡುವಂತೆ ಸೂಚಿಸಿದೆ.

ರಿಲೀಸ್ ಗೂ ಮೊದಲೇ ಐಫೋನ್ ಎಕ್ಸ್ ನಲ್ಲಿರೋ ರಹಸ್ಯ ಮಾಹಿತಿಗಳನ್ನೆಲ್ಲ ಬಹಿರಂಗ ಮಾಡಿದ್ದರಿಂದ ಆ್ಯಪಲ್ ಕಂಪನಿ ಈ ಕ್ರಮ ಕೈಗೊಂಡಿದೆ. ಆದ್ರೆ ತನ್ನ ತಂದೆಯನ್ನು ಕರ್ತವ್ಯದಿಂದ ವಜಾ ಮಾಡಿರುವ ಬಗ್ಗೆ ಬ್ರೂಕೆ ಅಸಮಾಧಾನ ಹೊರಹಾಕಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...