alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆಜಾನ್ ಗೆ ಸುಷ್ಮಾ ಸ್ವರಾಜ್ ವಾರ್ನಿಂಗ್, ಕಾರಣ ಗೊತ್ತಾ..?

ssma-sh-maezom

ನವದೆಹಲಿ: ಕೆನಡಾ ಮೂಲದ ಇ ಕಾಮರ್ಸ್ ಕಂಪನಿ ಅಮೆಜಾನ್ ವಿರುದ್ಧ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಕಿಡಿಕಾರಿದ್ದಾರೆ.

ದೇಶಾದ್ಯಂತ ಕೂಡ ಅಮೆಜಾನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಮೆಜಾನ್ 1491 ರೂ.ಗೆ ಭಾರತದ ರಾಷ್ಟ್ರಧ್ವಜ ಹೋಲುವ ಡೋರ್ ಮ್ಯಾಟ್ ಗಳನ್ನು ಮಾರಾಟಕ್ಕೆ ಇಟ್ಟಿತ್ತು.

ಭಾರತದ ರಾಷ್ಟ್ರ ಧ್ವಜ ಮಾದರಿಯಲ್ಲಿ ಕಾಲು ಒರೆಸುವ ಡೋರ್ ಮ್ಯಾಟ್ ಸಿದ್ಧಪಡಿಸಿ, ಮಾರಾಟಕ್ಕಿಟ್ಟಿರುವ ಅಮೆಜಾನ್ ಕೂಡಲೇ ತನ್ನ ಉತ್ಪನ್ನಗಳನ್ನು ವಾಪಸ್ ಪಡೆದುಕೊಳ್ಳಬೇಕೆಂದು ಸುಷ್ಮಾ ಸ್ವರಾಜ್ ತಾಕೀತು ಮಾಡಿದ್ದಾರೆ.

ಅಮೆಜಾನ್ ಕಂಪನಿ ಮಾಡಿದ ತಪ್ಪಿಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಕಂಪನಿಯ ಅಧಿಕಾರಿಗಳಿಗೆ ವೀಸಾ ನೀಡುವುದಿಲ್ಲ. ಈಗಾಗಲೇ ನೀಡಿರುವ ವೀಸಾ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅತುಲ್ ಬಿ. ಎಂಬುವವರು ಸುಷ್ಮಾ ಸ್ವರಾಜ್ ಅವರ ಗಮನಕ್ಕೆ ಇದನ್ನು ತಂದ ಕೂಡಲೇ ಕ್ರಮ ಕೈಗೊಂಡಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...