alex Certify
ಕನ್ನಡ ದುನಿಯಾ       Mobile App
       

Kannada Duniya

ನಿಷೇಧಿತ ಹಳೆ ನೋಟು ಬದಲಾವಣೆಗೆ ಮತ್ತೊಮ್ಮೆ ಅವಕಾಶ..?

note

ನಿಷೇಧಿತ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಗದಿತ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗದೇ ಇರುವವರಿಗೆ ಮತ್ತೊಂದು ಅವಕಾಶ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚ್ಯವಾಗಿ ಹೇಳಿದೆ.

ಆ ಹಣ ತಮ್ಮದೇ ಅನ್ನೋದನ್ನು ಅವರು ಸಾಬೀತು ಮಾಡಿದಲ್ಲಿ, ಡಿಸೆಂಬರ್ 30ರೊಳಗೆ ಬದಲಾವಣೆ ಮಾಡಿಕೊಳ್ಳದೇ ಇರುವುದಕ್ಕೆ ಸೂಕ್ತ ಕಾರಣ ನೀಡಿದಲ್ಲಿ ಮತ್ತೊಂದು ಅವಕಾಶ ಯಾಕೆ ನೀಡಬಾರದು ಅಂತಾ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರಕ್ಕೆ 2 ವಾರಗಳ ಕಾಲಾವಕಾಶ ನೀಡಲಾಗಿದೆ. ಗಡುವು ಮುಗಿದ ಬಳಿಕವೂ ನೋಟು ಬದಲಾವಣೆಗೆ ಅವಕಾಶ ನೀಡಿದಲ್ಲಿ ಅದನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂಬ ಅಂಕಿ-ಅಂಶಗಳನ್ನು ಕೂಡ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ನ್ಯಾಯಾಲಯದ ಮುಂದಿಟ್ಟಿದ್ದಾರೆ.

ಆದ್ರೆ ಕೆಲವೊಂದು ಅಪರೂಪದ ಪ್ರಕರಣಗಳಲ್ಲಿ ಕಷ್ಟಪಟ್ಟು ಕೂಡಿಟ್ಟ ಬಿಡಿಗಾಸನ್ನೂ ಕಳೆದುಕೊಳ್ಳುವಂತಹ ಪ್ರಸಂಗ ಬರುತ್ತದೆ ಅಂತಾ ಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗಾಗಿ ಈ ಬಗ್ಗೆ ಕೇಂದ್ರದ ಸಲಹೆ ಪಡೆದು ಪ್ರತಿಕ್ರಿಯಿಸುವುದಾಗಿ ಹೇಳಿರುವ ರಂಜಿತ್ ಕುಮಾರ್, 2 ವಾರಗಳ ಕಾಲಾವಕಾಶ ಕೋರಿದ್ದಾರೆ.

ಇದನ್ನೆಲ್ಲ ಗಮನಿಸಿದ್ರೆ ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗದೇ ಇದ್ದವರಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಜುಲೈ ಅಂತ್ಯದ ವೇಳೆಗೆ ಹಳೆ ನೋಟು ಎಕ್ಸ್ ಚೇಂಜ್ ಗೆ ಮತ್ತೊಂದು ಚಾನ್ಸ್ ಸಿಕ್ಕರೂ ಸಿಗಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...