alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಲ್ ಗೇಟ್ಸ್ ಹಿಂದಿಕ್ಕಿದ ಅಮೆಜಾನ್ CEO ವಿಶ್ವದ ಶ್ರೀಮಂತ

amezon-d

ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು, ಇ ಕಾಮರ್ಸ್ ದಿಗ್ಗಜ ಅಮೆಜಾನ್ ಸಿ.ಇ.ಒ. ಜೆಫ್ ಬೆಜೊಸ್ ಹಿಂದಿಕ್ಕಿದ್ದಾರೆ.

ಅಮೆಜಾನ್ ನ ಜೆಫ್ ಬೆಜೊಸ್ ವಿಶ್ವದ ನಂಬರ್ ಒನ್ ಶ್ರೀಮಂತರಾಗಿ ಹೊರ ಹೊಮ್ಮಿದ್ದಾರೆ. ಶೇರು ಮಾರುಕಟ್ಟೆಯಲ್ಲಿ ಅಮೆಜಾನ್ ಕಂಪನಿಯ ಶೇರುಗಳು ಶೇ. 1.6 ರಷ್ಟು ಏರಿಕೆಯಾಗಿದ್ದು, ಜೆಫ್ ಬೆಜೊಸ್ ಅವರಿಗೆ 1.4 ಶತಕೋಟಿ ಡಾಲರ್ ಹೆಚ್ಚುವರಿಯಾಗಿ ದೊರೆತಂತಾಗಿದೆ.

ಇದರೊಂದಿಗೆ ಜೆಫ್ ಬೆಜೊಸ್ ಅವರ ಸಂಪತ್ತು 90 ಶತಕೋಟಿ ಡಾಲರ್ ಅನ್ನು ಮೀರಿದೆ. 2013 ರ ಮೇ ನಿಂದ ಬ್ಲೂಮ್ ಬರ್ಗ್ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಬಿಲ್ ಗೇಟ್ಸ್ ಮೊದಲ ಸ್ಥಾನದಲ್ಲಿದ್ದರು.

ಬಿಲ್ ಗೇಟ್ಸ್ ಸಂಪತ್ತು 90 ಶತ ಕೋಟಿ ಡಾಲರ್ ನಷ್ಟಿದ್ದು, ಶೇರು ಮಾರುಕಟ್ಟೆಯಲ್ಲಿ ಅಮೆಜಾನ್ ಶೇರುಗಳಿಗೆ ಭಾರೀ ಬೇಡಿಕೆ ಬಂದ ಕಾರಣ, ಜೆಫ್ ಬೆಜೊಸ್ ಸಂಪತ್ತು ಏರಿಕೆಯಾಗಿ, 91 ಶತಕೋಟಿ ಡಾಲರ್ ದಾಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...