alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಾಲಂಟೈನ್ಸ್ ಧಮಾಕಾ: 6 ಸಾವಿರ ರೂ.ಇಳಿಕೆಯಾಯ್ತು ಈ ಮೊಬೈಲ್ ಬೆಲೆ

ಯಾವುದೇ ವಿಶೇಷ ಸಮಾರಂಭವಿರಲಿ ಇ-ಕಾಮರ್ಸ್ ಕಂಪನಿಗಳು ಗ್ರಾಹಕರಿಗೆ ಉಡುಗೊರೆ ನೀಡಲು ಸಿದ್ಧವಾಗಿರುತ್ವೆ. ಈಗ ವ್ಯಾಲಂಟೈನ್ ವೀಕ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅಮೆಜಾನ್ ವಿವೋ ಕಾರ್ನಿವಲ್ ಆಯೋಜನೆ ಮಾಡಿದೆ. ಫೆಬ್ರವರಿ 12ರಿಂದ ಈ ಕಾರ್ನಿವಲ್ ಶುರುವಾಗಿದ್ದು ಫೆಬ್ರವರಿ 14ರವರೆಗೆ ನಡೆಯಲಿದೆ.

ಈ ಸಂದರ್ಭದಲ್ಲಿ ಗ್ರಾಹಕರಿಗೆ ಭರ್ಜರಿ ರಿಯಾಯಿತಿ, ವಿನಿಮಯ ಕೊಡುಗೆ ಹಾಗೂ ಬಡ್ಡಿಯಿಲ್ಲದ ಇಎಂಐ ಲಭ್ಯವಾಗಲಿದೆ. ಕಾರ್ನಿವಲ್ ಸೇಲ್ ನಲ್ಲಿ ವಿವೋದ ಲಿಮಿಟೆಡ್ ಆವೃತ್ತಿ ವಿ7 ಪ್ಲಸ್ 22,900 ರೂಪಾಯಿಗೆ ಸಿಗ್ತಿದೆ. ಈ ಫೋನ್ ಕೆಂಪು ಬಣ್ಣದಲ್ಲಿ ಗ್ರಾಹಕರಿಗೆ ಸಿಗಲಿದೆ. ಈ ಸ್ಮಾರ್ಟ್ ಫೋನ್ ಖರೀದಿ ಮಾಡಿದ ಗ್ರಾಹಕರಿಗೆ 500 ರೂಪಾಯಿ ವೋಚರ್ ಸಿಗಲಿದೆ.

ಈ ಸ್ಮಾರ್ಟ್ಫೋನ್ ಜೊತೆ 18,752 ರೂಪಾಯಿ ವಿನಿಮಯ ಪ್ರಸ್ತಾವನೆಯನ್ನೂ ಇಡಲಾಗಿದೆ. ಇದಲ್ಲದೆ ಮೂಲ ವಿವೋ V7 + ಸ್ಮಾರ್ಟ್ಫೋನ್ ಬೆಲೆಯನ್ನು 21,999 ರೂಪಾಯಿಗೆ ನೀಡಲಾಗ್ತಿದೆ. ವಿನಿಮಯ ಆಫರ್ ನಲ್ಲಿ ಗ್ರಾಹಕರಿಗೆ 2 ಸಾವಿರ ರೂಪಾಯಿ ಲಾಭವಾಗಲಿದೆ.

ಸೇಲ್ ನಲ್ಲಿ ವಿ5 ಪ್ಲಸ್ ಫೋನ್ ಬೆಲೆಯಲ್ಲಿ 6 ಸಾವಿರ ರೂಪಾಯಿ ಇಳಿಕೆ ಮಾಡಲಾಗಿದೆ. ಗ್ರಾಹಕರಿಗೆ ಸೇಲ್ ನಲ್ಲಿ ವಿ5 ಪ್ಲಸ್ ಮೊಬೈಲ್ 19,990 ರೂಪಾಯಿಗೆ ಸಿಗಲಿದೆ. ವಿನಿಮಯ ಆಫರ್ ನಲ್ಲಿ 3 ಸಾವಿರ ರೂಪಾಯಿ ಹೆಚ್ಚುವರಿ ರಿಯಾಯಿತಿ ಸಿಗಲಿದೆ. ವಿ5 ಎಸ್ ಫೋನ್ ಬೆಲೆಯಲ್ಲಿ 3 ಸಾವಿರ ರೂಪಾಯಿ ಇಳಿಕೆ ಮಾಡಲಾಗಿದೆ. ಈಗ ವಿ5 ಪ್ಲಸ್ ಫೋನ್ 15,990 ರೂಪಾಯಿಗೆ ಸಿಗಲಿದ್ದು ವಿನಿಮಯ ಆಫರ್ ನಲ್ಲಿ ಹೆಚ್ಚುವರಿಯಾಗಿ 2500 ರೂಪಾಯಿ ರಿಯಾಯಿತಿ ಸಿಗಲಿದೆ.

ಸೇಲ್ ನಲ್ಲಿ ವಿವೋ ಕಾರ್ನಿವಲ್ ನಲ್ಲಿ ವಿವೋ ವಿ69 ಹಾಗೂ ವಿವೋ66 ಫೋನ್ ಬೆಲೆ ಸಾವಿರ ರೂಪಾಯಿ ಇಳಿಕೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...