alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಪ್ರೈಂ ಸದಸ್ಯರಿಗಾಗಿ ಅಮೇಜಾನ್ ಶುರುಮಾಡ್ತಿದೆ ಬಿಗ್ ಸೇಲ್

amazon_sale_new_main_1499676576_618x347ಅಮೇಜಾನ್ ಪ್ರೈಂ ಡೇ ಸೇಲ್ ಇಂದು ಸಂಜೆ ಆರು ಗಂಟೆಗೆ ಶುರುವಾಗಲಿದೆ. ಸುಮಾರು 30 ಗಂಟೆಗಳ ಕಾಲ ಈ ಸೇಲ್ ನಡೆಯಲಿದ್ದು, ಅಮೆಜಾನ್ ಪ್ರೈಂ ಸದಸ್ಯರಿಗಾಗಿ ಅನೇಕ ಆಫರ್ ನೀಡಲು ಸಿದ್ಧವಾಗಿದೆ.

ಇದೇ ಮೊದಲ ಬಾರಿಗೆ ಅಮೇಜಾನ್ ಕಂಪನಿ ಭಾರತದಲ್ಲಿ ಪ್ರೈಂ ಡೇ ಆಚರಿಸ್ತಿದೆ. ಅಮೇಜಾನ್ ಪ್ರೈಂ ಸದಸ್ಯತ್ವ ಪಡೆದವರು ಮಾತ್ರ ಈ ಸೇಲ್ ನ ಲಾಭ ಪಡೆಯಬಹುದಾಗಿದೆ. ಪ್ರತಿ ಐದು ನಿಮಿಷಕ್ಕೊಮ್ಮೆ ಅಮೇಜಾನ್ ಪ್ರೈಂ ಸದಸ್ಯರಿಗಾಗಿ ತನ್ನ ಆಫರ್ ಬದಲಾಯಿಸಲಿದೆ. ದೊಡ್ಡ ಮಟ್ಟದಲ್ಲಿ ರಿಯಾಯಿತಿ ನೀಡುವ ಜೊತೆಗೆ ಶೀಘ್ರ ಡಿಲೆವರಿ ವ್ಯವಸ್ಥೆಯನ್ನೂ ಅಮೇಜಾನ್ ನೀಡ್ತಾ ಇದೆ.

ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ಮೇಲೆ ಭಾರೀ ರಿಯಾಯಿತಿ ಸಿಗ್ತಾ ಇದೆ. ಇದ್ರ ಜೊತೆಗೆ ಈ ವಿಶೇಷ ಸಂದರ್ಭದಲ್ಲಿ ಕೆಲವೊಂದು ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದೆ. ರೆಡ್ ಮಿ 4 ಸ್ಮಾರ್ಟ್ ಫೋನ್ ಬೆಲೆ 6999 ರೂಪಾಯಿಯಾಗಿದ್ದು ಸಂಜೆ 5 ಗಂಟೆ ನಂತ್ರ ಇದು ಗ್ರಾಹಕರಿಗೆ ಲಭ್ಯವಾಗಲಿದೆ.

OnePlus 5 ಸ್ಮಾರ್ಟ್ ಫೋನ್ ಮೇಲೆ ವಿನಿಮಯ ಆಫರ್ ನೀಡಲಾಗ್ತಾ ಇದೆ. ಪ್ರೈಂ ಸದಸ್ಯರಿಗೆ 2 ಸಾವಿರ ರೂಪಾಯಿಯವರೆಗೆ ಕ್ಯಾಶ್ಬ್ಯಾಕ್ ನೀಡ್ತಾ ಇರುವ ಅಮೇಜಾನ್ ಹೆಚ್ ಡಿಎಫ್ ಸಿ ಕಾರ್ಡ್ ಬಳಕೆದಾರರಿಗೆ ಶೇಕಡಾ 15ರಷ್ಟು ಕ್ಯಾಶ್ ಬ್ಯಾಕ್ ನೀಡಲಿದೆ. ಅದ್ರೆ ಹೆಚ್ ಡಿಎಫ್ ಸಿ ಕಾರ್ಡ್ ಬಳಸಿದವರು 2 ಸಾವಿರ ರೂಪಾಯಿ ಉಳಿಸಬಹುದಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...