alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರಾಟಕ್ಕಿದೆ ಬಿಗ್ ಬಜಾರ್: ಖರೀದಿ ಪೈಪೋಟಿಯಲ್ಲಿ 2 ಕಂಪನಿ

ದೇಶದ ಅತಿ ದೊಡ್ಡ ಚಿಲ್ಲರೆ ವ್ಯಾಪಾರ ಕಂಪನಿ ಬಿಗ್ ಬಜಾರ್ ಮಾರಾಟವಾಗ್ತಿದೆ. ಯಸ್ ಕಿಶೋರ್ ಬಿಯಾನಿ ಕಂಪನಿ ಬಿಗ್ ಬಜಾರ್ ಮಾರಾಟಕ್ಕೆ ಮುಂದಾಗಿದೆ. ಬಿಗ್ ಬಜಾರನ್ನು ಯಾರು ಖರೀದಿ ಮಾಡ್ತಾರೆ ಎಂಬ ಪ್ರಶ್ನೆ ಸದ್ಯ ಎಲ್ಲರನ್ನು ಕಾಡ್ತಿದೆ.

ಇ ಕಾಮರ್ಸ್ ಕಂಪನಿ ಅಮೆಜಾನ್ ಅಥವಾ ಅಲಿಬಾಬಾ, ಬಿಗ್ ಬಜಾರ್ ಖರೀದಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಎರಡು ವಾರಗಳ ಹಿಂದೆ ಕಿಶೋರ್ ಬಿಯಾನಿ ಅಮೆಜಾನ್ ಮಾಲೀಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಿರಾಣಿ ಹಾಗೂ ಆಹಾರ ಮಳಿಗೆಯನ್ನು ತೆಗೆಯಲು ಅಮೆಜಾನ್ ಗೆ ಈಗಾಗಲೇ ಭಾರತ ಸರ್ಕಾರ ಅನುಮತಿ ನೀಡಿದೆ. ಹಾಗಾಗಿ ಅಮೆಜಾನ್ ಬಿಗ್ ಬಜಾರ್ ಖರೀದಿ ಮಾಡುವ ಸಾಧ್ಯತೆ ಹೆಚ್ಚಿದೆ.

ಇಡೀ ದೇಶದಾದ್ಯಂತ ಬಿಗ್ ಬಜಾರ್ ನ 930 ಮಳಿಗೆಗಳಿವೆ. ಕಿರಾಣಿ ಅಂಗಡಿ ಹೆಸರಲ್ಲಿ ಕೆಲ ಸಣ್ಣ ಪ್ರದೇಶಗಳಲ್ಲೂ ಬಿಗ್ ಬಜಾರ್ ತಲೆ ಎತ್ತಿದೆ. ಬಿಗ್ ಬಜಾರ್ ಮೂಲಕ, ಫ್ಯೂಚರ್ ಗ್ರೂಪ್ 17075 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತದೆ. ಇದ್ರ ಜೊತೆಗೆ ಬಿಗ್ ಬಜಾರ್ ನ ಅಂಗಸಂಸ್ಥೆಗಳೂ ಭಾರತದಲ್ಲಿವೆ.

ಚೀನಾ ಮೂಲಕ ಅಲಿಬಾಬಾ ಕೂಡ ಭಾರತದಲ್ಲಿ 500 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಒಂದು ವೇಳೆ ಅಲಿಬಾಬಾ, ಬಿಗ್ ಬಜಾರ್ ಖರೀದಿ ಮಾಡಿದ್ರೆ ಇದ್ರಿಂದ ಅಮೆಜಾನ್ ಮೇಲೆ ದೊಡ್ಡ ಹೊಡೆತ ಬೀಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...