alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ಷಾಬಂಧನ ವಿಶೇಷ: ಅಮೆಜಾನ್ ನೀಡ್ತಿದೆ ಶೇ.45ರಷ್ಟು ರಿಯಾಯಿತಿ

rakhi_22_1501418921_618x347

ಅಕ್ಕ-ತಂಗಿಯರ ಬಾಂಧವ್ಯ ಬೆಸೆಯುವ ರಕ್ಷಾಬಂಧನವನ್ನು ಈ ಬಾರಿ ಆಗಸ್ಟ್ 7ರಂದು ಆಚರಿಸಲಾಗುತ್ತಿದೆ. ಈ ಹಬ್ಬದಂದು ಸಹೋದರ ತನ್ನ ಸಹೋದರಿಗೆ ಒಳ್ಳೆ ಗಿಫ್ಟ್ ನೀಡಲು ಇಷ್ಟಪಡ್ತಾನೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಇ-ಕಾಮರ್ಸ್ ಕಂಪನಿ ಅಮೆಜಾನ್ ಇಂಡಿಯಾ ಕೆಲವೊಂದು ಆಕರ್ಷಕ ಕೊಡುಗೆ ನೀಡಲು ಮುಂದಾಗಿದೆ. ಇದ್ರಲ್ಲಿ ಗ್ರಾಹಕರಿಗೆ ಶೇಕಡಾ 45ರಷ್ಟು ರಿಯಾಯಿತಿ ಸಿಗ್ತಾ ಇದೆ.

ಅಮೆಜಾನ್ ಮೂಲಕ ಕ್ಯಾಡ್ಬರಿ ಗ್ರಾಹಕರಿಗೆ ಶೇಕಡಾ 10ರಷ್ಟು ರಿಯಾಯಿತಿ ನೀಡ್ತಾಯಿದೆ. ಜೊತೆಗೆ ಸಹೋದರಿಯರಿಗೂ ಇಲ್ಲಿ ಅವಕಾಶವಿದೆ. ಸಹೋದರನಿಗೆ ಕಟ್ಟುವ ಸುಂದರ ರಾಖಿಗಳು ಅಮೆಜಾನ್ ನಲ್ಲಿ ಲಭ್ಯವಿದ್ದು, ಬೇರೆ ಬೇರೆ ಬೆಲೆ ಹಾಗೂ ರಿಯಾಯಿತಿ ನೀಡಲಾಗಿದೆ.

ಸಹೋದರಿಯರಿಗೆ ಡ್ರೆಸ್ ಉಡುಗೊರೆ ಮಾಡೋದಾದ್ರೆ ಶೇಕಡಾ 80 ರಷ್ಟು ರಿಯಾಯಿತಿ ಸಿಗಲಿದೆ. ಹ್ಯಾಂಡ್ ಬ್ಯಾಗ್ ಗೆ ಶೇಕಡಾ 40 ರಷ್ಟು, ಪಾದರಕ್ಷಗೆ ಶೇಕಡಾ 60 ರಷ್ಟು, ಆಭರಣಕ್ಕೆ ಶೇಕಡಾ 70 ರಷ್ಟು ರಿಯಾಯಿತಿ ನೀಡ್ತಾ ಇದೆ ಅಮೆಜಾನ್.

ಇಮೇಲ್ ಮೂಲಕ ಗಿಫ್ಟ್ ಕಾರ್ಡ್ ಕಳುಹಿಸುವ ಅವಕಾಶವನ್ನೂ ಕಂಪನಿ ನೀಡಿದೆ. ಸಣ್ಣ ಮಕ್ಕಳ ಬಟ್ಟೆ, ಆಟಿಕೆ, ಉತ್ಪನ್ನಗಳಿಗೂ ಭರ್ಜರಿ ರಿಯಾಯಿತಿ ನೀಡಲಾಗಿದ್ದು, ಸಹೋದರರು ಅದ್ರ ಲಾಭ ಪಡೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...