alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ನಷ್ಟದ ಭೀತಿಯಲ್ಲಿವೆ ಏರ್ಟೆಲ್, ವೊಡಾಫೋನ್, ಐಡಿಯಾ

loss

ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ, ಟೆಲಿಕಾಂ ಕಂಪನಿಗಳ ಇಂಟರ್ ಕನೆಕ್ಟ್ ಯೂಸೇಜ್ ದರವನ್ನು ಕಡಿಮೆ ಮಾಡಿದ್ರೆ ಏರ್ಟೆಲ್, ವೊಡಾಫೋನ್ ಮತ್ತು ಐಡಿಯಾ ನಷ್ಟ ಅನುಭವಿಸಲಿವೆ. ಸದ್ಯ ಟೆಲಿಕಾಂ ಕಂಪನಿಗಳು ಇನ್ ಕಮಿಂಗ್ ಕರೆಯನ್ನು ಕನೆಕ್ಟ್ ಮಾಡಲು ಅಥವಾ ರಿಸೀವ್ ಮಾಡಲು ಗ್ರಾಹಕರಿಗೆ 14 ಪೈಸೆ ಶುಲ್ಕ ವಿಧಿಸುತ್ತಿವೆ.

ಐಸಿಯುವನ್ನು ಟರ್ಮಿನೇಶನ್ ಶುಲ್ಕ ಅಂತಾನೂ ಕರೆಯಲಾಗುತ್ತದೆ. ಈ ಶುಲ್ಕವನ್ನು 5-8 ಪೈಸೆಗೆ ಇಳಿಸಲು ಟ್ರಾಯ್ ಚಿಂತನೆ ನಡೆಸಿದೆ. ಈ ಪ್ರಸ್ತಾಪದ ಬಗ್ಗೆ ತಿಂಗಳಾಂತ್ಯದಲ್ಲಿ ಅಂತಿಮ ನಿರ್ಧಾರಕ್ಕೆ ಬರಲಿದೆ. ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿರೋದ್ರಿಂದ ಐಸಿಯು ಪಡೆಯಲೇಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹಲವು ಸಂಸದರು ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರಂತೆ. ಜಿಯೋ ಆಗಮನದಿಂದಾಗಿ ಈಗಾಗ್ಲೇ ಉಳಿದ ಟೆಲಿಕಾಂ ಕಂಪನಿಗಳು ನಷ್ಟದ ಸುಳಿಗೆ ಸಿಲುಕಿವೆ. ಜಿಯೋ ಉಚಿತ ಸೇವೆ, ಅನ್ ಲಿಮಿಟೆಡ್ ಕಾಲ್, ಡೇಟಾದಂತಹ ಆಫರ್ ಗಳಿಂದಾಗಿ ಉಳಿದ ಕಂಪನಿಗಳು ಗ್ರಾಹಕರನ್ನು ಕಳೆದುಕೊಳ್ಳುತ್ತಿವೆ, ಈಗ ಟ್ರಾಯ್ ಶುಲ್ಕ ಕಡಿತ ಮಾಡಿದ್ರೆ ಮತ್ತಷ್ಟು ನಷ್ಟ ಅನುಭವಿಸೋದು ಖಚಿತ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...